ಐದು ಮಂದಿ ಕ್ರೈಸ್ತ ಸಾಧಕ ಗಣ್ಯರಿಗೆ ರಚನಾ ಪ್ರಶಸ್ತಿ ಘೋಷಣೆ

5:30 PM, Friday, November 11th, 2011
Share
1 Star2 Stars3 Stars4 Stars5 Stars
(5 rating, 1 votes)
Loading...

Rachana Award

ಮಂಗಳೂರು  : ಕ್ಯಾಥೋಲಿಕ್‌ ಚೇಂಬರ್‌ ಆಫ್‌ ಕಾಮರ್ಸ್‌ ಆಂಡ್ ಇಂಡಸ್ಟ್ರೀಸ್‌ ವತಿಯಿಂದ ಪ್ರತಿ ವರ್ಷ ನೀಡಲಾಗುವ ರಚನಾ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿರುವ ಐವರು ಸಾಧಕರಿಗೆ ಈ  ವರ್ಷ ಘೋಷಿಸಲಾಗಿದೆ.

ರಚನಾ ಮಹಿಳಾ ಪ್ರಶಸ್ತಿಗೆ ಸಿ| ಮರಿಯಾ ಗೊರಟ್ಟಿ, ಮದರ್‌ ಜನರಲ್‌, ಎಸ್‌.ಆರ್‌.ಎ. ಆಸ್ಟ್ರೀಯಾ, ರಚನಾ ಕೃಷಿಕ ಪ್ರಶಸ್ತಿಗೆ ಪಾವ್‌ ತಾವ್ರೊ ಮಡಂತ್ಯಾರು, ರಚನಾ ಉದ್ಯಮಿ ಪ್ರಶಸ್ತಿಗೆ ರಿಚರ್ಡ್‌ ರೋಡ್ರಿಗಸ್‌ ಮಂಗಳೂರು, ರಚನಾ ವೃತ್ತಿಪರ ಪ್ರಶಸ್ತಿಗೆ ಸಿ.ಟಿ.ಜೆ. ಗೊನ್ಸಾಲ್ವಿಸ್‌ ಹಾಗೂ ರಚನಾ ಅನಿವಾಸಿ ಭಾರತೀಯ ಉದ್ಯಮಿ ಪ್ರಶಸ್ತಿಗೆ ಲಾರೆನ್ಸ್‌ ಡಿಸೋಜ ಕುವೈಟ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಚನಾ ಅಧ್ಯಕ್ಷ ಮಾರ್ಸೆಲ್‌ ಮೊಂತೇರೊ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

1998ರಲ್ಲಿ ಸ್ಥಾಪನೆಗೊಂಡ ರಚನಾ ವಿವಿದೆಡೆಗಳಲ್ಲಿ ಹರಡಿಕೊಂಡಿರುವ ತಂತಮ್ಮ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿರುವ ಮಂಗಳೂರು ಮೂಲದ ಕ್ರೈಸ್ತ ಸಮುದಾಯದ ಗಣ್ಯರನ್ನು ಪರಿಗಣಿಸಿ ರಚನಾ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯವನ್ನು ಕಳೆದ 9 ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ ಎಂದು ಅವರು ವಿವರಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭ ನ. 27ರಂದು ಸಂಜೆ 6 ಗಂಟೆಗೆ ನಗರದ ಮಿಲಾಗ್ರಿಸ್‌ ಜ್ಯುಬಿಲಿ ಸಭಾಭವನದಲ್ಲಿ ಮಂಗಳೂರಿನ ಬಿಷಪ್‌ ರೈ| ರೆ| ಡಾ| ಅಲೋಶಿಯಸ್‌ ಪಾವ್ಲ್  ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಜರಗಲಿದೆ ಎಂದು ವಿವರಿಸಿದರು.

ಮುಖ್ಯ ಅತಿಥಿಯಾಗಿ ರಾಷ್ಟ್ರಪತಿಯವರ ಕಾರ್ಯದರ್ಶಿ ಡಾ| ಕ್ರಿಸ್ಟಿ ಫೆರ್ನಾಂಡಿಸ್‌ ಅವರು ಆಗಮಿಸಲಿರುವರು ಎಂದರು.

ಉಪಾಧ್ಯಕ್ಷ ಲಾನ್ಸಿ ಮಸ್ಕರೇನಸ್‌, ಕಾರ್ಯದರ್ಶಿ ರೇಮಂಡ್‌ ಡಿಕುನ್ನಾ, ನಿಕಟಪೂರ್ವ ಅಧ್ಯಕ್ಷ ರೊನಾಲ್ಡ್‌ ಗೋಮ್ಸ್‌, ರಾಹುಲ್‌ ಜಾಹೀರಾತು ಸಂಸ್ಥೆಯ ಮುಖ್ಯಸ್ಥ ಟೈಟಸ್‌ ನೊರೊನ್ನಾ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English