ಮೂಡುಬಿದಿರೆ: 2018ರಲ್ಲಿ ನಡೆದ ರಾಷ್ಟ್ರೀಯ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆಗೆ ಮೂಡುಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನ 3,648 ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ 3,284 ವಿದ್ಯಾರ್ಥಿಗಳು ಅರ್ಹತೆಯನ್ನು ಪಡೆಯುವ ಮೂಲಕ ಶೇ.90.02 ದಾಖಲೆಯ ಫಲಿತಾಂಶವನ್ನು ದಾಖಲಿಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
26 ವಿದ್ಯಾರ್ಥಿಗಳು 500ಕ್ಕೂ ಹೆಚ್ಚು ಅಂಕಗಳನ್ನು ಪಡೆದಿರುತ್ತಾರೆ. ಇದಲ್ಲದೆ 224 ವಿದ್ಯಾರ್ಥಿಗಳು 400ಕ್ಕಿಂತಲೂ ಅಧಿಕ ಅಂಕಗಳನ್ನು ಪಡೆದಿರುತ್ತಾರೆ. ರಾಷ್ಟ್ರೀಯ ಮಟ್ಟದಲ್ಲಿ ಕೆಟಗೆರೆ ವಿಭಾಗದಲ್ಲಿ ಪದ್ಮಾವತಿ (33), ಯತೀಶ (140), ಗುಣಶೀಲ (195), ವಂಶಿತೇಜ(305), ವೆಂಕಟೇಶ ದೊರೆ (409), ಗೌತಮ ಬುದ್ಧ (457), ನಂದೀಶ್ (458) ಮತ್ತು ನೇತ್ರೇಶ್ (561) ರ್ಯಾಂಕ್‍ಗಳನ್ನು ಪಡೆದಿರುತ್ತಾರೆ.
ಭಿನ್ನಚೇತನರ ಪಟ್ಟಿಯಲ್ಲಿ ಮಂಜುನಾಥ್ ದೊಂಬಾರ್ (286), ರಕ್ಷಿತಾ ಬಿ.ಪಿ (295), ಭಾಗ್ಯಶ್ರೀ (271), ಅಜಯ್ ಕುಮಾರ್ (519) ನೇಯ ರ್ಯಾಂಕ್ ರಾಷ್ಟ್ರೀಯ ಮಟ್ಟದಲ್ಲಿ ಪಡೆದಿರುತ್ತಾರೆ.
ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಶೆಟ್ಟಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English