ಮೈಸೂರು: ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಅಪ್ಪ- ಮಕ್ಕಳ ಸಂಚು ಮಾಡಿದ್ದಾರೆ ಎಂದು ಜೆಡಿಎಸ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ನಗರದ ಪ್ರೆಸಿಡೆಂಟ್ ಹೊಟೇಲ್‌ನಲ್ಲಿ ಮಾತನಾಡಿದ ಅವರು, ಹೊಂದಾಣಿಕೆ ರಾಜಕೀಯದ ಮೂಲಕ ಕಾಂಗ್ರೆಸ್ ಮುಗಿಸಲು ಸಂಚು ರೂಪಿಸಿದ್ದಾರೆ. ಈ ಅಪ್ಪ-ಮಕ್ಕಳ ಸಂಚಿಗೆ ಕಾಂಗ್ರೆಸ್ ಬಲಿಯಾಗಲಿದೆ ಎಂದು ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಹೆಸರನ್ನು ಹೇಳದೆಯೇ ಟೀಕಿಸಿದರು. ಜೆಡಿಎಸ್‌ನ್ನು ಟೀಕಿಸಿದ ಬಿಎಸ್‌ವೈ ಕಾಂಗ್ರೆಸ್ ಬಗ್ಗೆ ಮೃದು ಧೋರಣೆ ತೋರಿದರು.
ಕುಮಾರಸ್ವಾಮಿ ಬಜೆಟ್ ಮಂಡಿಸುವುದನ್ನ ಕಾದು ನೋಡೋಣ. ಒಂದು, ಎರಡು , ಮೂರು ತಿಂಗಳು ಕಾದು ನೋಡೋಣ ಎಂದರು. ಜಯನಗರ ಕ್ಷೇತ್ರ ಹಾಗೂ ವಿಧಾನಪರಿಷತ್‌ನಲ್ಲೂ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ. ಅವರೇನಾದರೂ ಮಾಡಲಿ, ನಮ್ಮ ಪ್ರಯತ್ನ ಮಾತ್ರ ನಿಲ್ಲೋದಿಲ್ಲ ಎಂದರು.
ಇಂದು ಹಲವು ಕಡೆ ವಿಧಾನಪರಿಷತ್ ಚುನಾವಣಾ ಪ್ರಚಾರಕ್ಕೆ ಹೋಗಬೇಕಿತ್ತು. ಹವಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಪ್ರಯಾಣ ರದ್ದು ಮಾಡಿ ಪ್ರಚಾರಕ್ಕೆ ಹೋಗುತ್ತಿಲ್ಲ ಎಂದು ಬಿಎಸ್‌ವೈ ತಿಳಿಸಿದರು.
Click this button or press Ctrl+G to toggle between Kannada and English