ಆಳ್ವಾಸ್‍ನಲ್ಲಿ ಎನ್‍ಸಿಸಿ ನೌಕದಳ ಶಿಬಿರ

5:53 PM, Wednesday, June 6th, 2018
Share
1 Star2 Stars3 Stars4 Stars5 Stars
(No Ratings Yet)
Loading...

alwas-NCCಮೂಡುಬಿದಿರೆ: ಇಲ್ಲಿನ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ಎನ್‍ಎನ್‍ಸಿ ನೌಕದಳದ ವಾರ್ಷಿಕ ಶಿಬಿರ ಕಳೆದ ಆರು ದಿನಗಳಿಂದ ನಡೆಯುತ್ತಿದ್ದು, ಬುಧವಾರ ಕರ್ನಾಟಕ-ಗೋವಾ ಡೈರಕ್ಟರ್‍ನ ಎನ್‍ಸಿಸಿ ಡೆಪ್ಯುಟಿ ಡೈರೆಕ್ಟರ್ ಜನರಲ್ ಬ್ರಿಗೇಡಿಯರ್ ಡಿ.ಎಂ ಪೂರ್ವಿಮಠ್ ಬೇಟಿ ನೀಡಿ ಕೆಡೆಟ್‍ಗಳ ಜೊತೆ ಸಮಾಲೋಚನೆ ನಡೆಸಿದರು.

ಕೆಡೆಟ್‍ಗಳ ಗೌರವರಕ್ಷೆ ಸ್ವೀಕರಿಸಿದ ಬಳಿಕ ಕೆಡೆಟ್‍ಗಳ ಬಳಿ ಶಿಬಿರ, ತರಬೇತಿ ಬಗ್ಗೆ ಮಾಹಿತಿ ಪಡೆದರು. ಬಳಿಕ ಕೆಡೆಟ್‍ಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಎನ್‍ಸಿಸಿ ಕೆಡೆಟ್‍ಗಳು ಶಿಬಿರದಲ್ಲಿ ಪಡೆಯುವ ಜ್ಞಾನ, ಶಿಸ್ತನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು.

alwas-NCC-2ಎನ್‍ಸಿಸಿಯ ಮಹತ್ವ ಅರಿತು ಅದನ್ನು ಸದುಪಯೋಗಪಡಿಸಿಕೊಂಡರೆ ಅದರ ಪ್ರಯೋಜನವನ್ನು ಕೆಡೆಟ್‍ಗಳು ಮಾತ್ರವಲ್ಲ ಸಮಾಜ ಪಡೆಯಬಹುದು. ಕೆಡೆಟ್‍ಗಳಿಗೆ ಸಮವಸ್ತ್ರದ ವ್ಯವಸ್ಥೆಯನ್ನು ಶೀಘ್ರ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅದನ್ನು ಶೀಘ್ರ ಒದಗಿಸುವಂತಹ ವ್ಯವಸ್ಥೆ ಆಗಲಿದೆ ಎಂದರು.

ಗ್ರೂಪ್ ಕಮಾಂಡರ್ ಕರ್ನಲ್ ಅನಿಲ್ ನೌಟಿಯಲ್, ತರಬೇತಿ ಕಮಾಂಡರ್ ಲೆಫ್ಟಿನಲ್ ಕರ್ನಲ್ ಅಮಿತ್ ಅಸ್ತ್ರಿ, ಶಿಬಿರದ ಕಮಾಂಡರ್ ವಿಫುಲ್ ಗುಪ್ತಾ ಉಪಸ್ಥಿತರಿದ್ದರು.

ಜಿಲ್ಲೆಯ 28 ಸಂಸ್ಥೆಗಳ ಒಟ್ಟು 583 ನೌಕದಳದ ಕೆಡೆಟ್‍ಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English