ಉಡುಪಿಯಲ್ಲಿ ಮಾಜಿ ನಕ್ಸಲ್‌ ಬಂಧನ, ಪತ್ನಿಯಿಂದ ಪೊಲೀಸರ ವಿರುದ್ಧ ಗಂಭೀರ ಆರೋಪ

5:18 PM, Thursday, June 7th, 2018
Share
1 Star2 Stars3 Stars4 Stars5 Stars
(No Ratings Yet)
Loading...

naxalateಉಡುಪಿ: ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ್ ಅವರನ್ನು ಕುಂದಾಪುರ ಪೊಲೀಸರು ಉಡುಪಿ ನ್ಯಾಯಾಲಯದ ಮುಂದೆಯೇ ಬಂಧಿಸಿದ್ದಾರೆ.

ನ್ಯಾಯಾಲಯದಿಂದ ಹೊರಬರುತ್ತಿದ್ದಂತೆ ವಾರೆಂಟ್ ನೀಡಿ ನಿಲಗುಳಿ ಪದ್ಮನಾಭ್ ಅವರನ್ನು ಬಂಧಿಸಲಾಗಿದೆ.

ಕಳೆದ ಹಲವು ದಶಕಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ ನಿಲಗುಳಿ ಪದ್ಮನಾಭ 2016ರ ನವೆಂಬರ್‌ನಲ್ಲಿ ಗೌರಿ ಲಂಕೇಶ್ ಅವರ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಿದ್ದರು.

ಇತ್ತ ಪದ್ಮನಾಭ್ ಬಂಧನಕ್ಕೆ ಅವರ ಪತ್ನಿ ರೇಣುಕಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದ್ಮನಾಭ್‌ ಸಮಾಜದ ಮುಖ್ಯವಾಹಿನಿಗೆ ಬಂದ್ರು ಪೊಲೀಸರು ನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ರೇಣುಕಾ ಆರೋಪಿಸಿದ್ದಾರೆ.

ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ್‌ರನ್ನ ಉಡುಪಿಯ ಕುಂದಾಪುರ ಪೊಲೀಸರು ಏಕಾಏಕಿ ಅರೆಸ್ಟ್ ಮಾಡಿರೋದಕ್ಕೆ ಪದ್ಮನಾಭ್ ಪತ್ನಿ ರೇಣುಕಾ ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಒಂಬತ್ತು ತಿಂಗಳು ಜೈಲಿನಲ್ಲಿದ್ದಾಗ ಯಾರು ಬಂದಿರಲಿಲ್ಲ, ಯಾವ ವಾರಂಟೂ ಬಂದಿರಲಿಲ್ಲ.

ಈಗ ಕಳೆದ ನಾಲ್ಕು ದಿನಗಳಿಂದ ಉಡುಪಿಯಲ್ಲೇ ಇದ್ರು ನ್ಯಾಯಾಲಯದ ಗಮನಕ್ಕೂ ತರದೆ ಕೋರ್ಟ್‌ನಿಂದ ಹೊರಬರುವ ವೇಳೆ ಪೊಲೀಸರೇ ಕಿಡ್ನಾಪ್ ರೀತಿ ಕಾರಣವಿಲ್ಲದೆ ಅರೆಸ್ಟ್‌ ಮಾಡಿದ್ದಾರೆ.

ಪೊಲೀಸರನ್ನು ಕೇಳಿದ್ರೆ ಇದು ಹೊಸ ಕೇಸು, ಬೇರೆ ಕೇಸು ಎನ್ನುತ್ತಿದ್ದಾರೆ ಎಂದು ರೇಣುಕಾ ಪೊಲೀಸರ ವಿರುದ್ಧ ಕಿಡಿ ಕಾರಿದ್ದಾರೆ. ಶರಣಾಗತಿಯಾಗಿ, ಜೈಲಿನಿಂದ ಬಂದ‌ ಮೇಲೂ ಪೊಲೀಸರು ಸಾಕಷ್ಟು ಮಾನಸಿಕ ಹಿಂಸೆ ನೀಡಿದ್ದಾರೆ. ಎಲ್ಲಿಗೇ ಹೋದ್ರು ಹಿಂಬಾಲಿಸುತ್ತಿದ್ರು. ಈಗ ಕಾರಣವಿಲ್ಲದೆ ಅರೆಸ್ಟ್ ಮಾಡಿದ್ದಾರೆಂದು‌ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈಗೆ ದೂರು ನೀಡಲು ಪತ್ನಿ ರೇಣುಕಾ ಮುಂದಾಗಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English