ಕಾಂಗ್ರೆಸ್‌ ಹೈಕಮಾಂಡ್‌ಗೆ ತಮ್ಮ ಶಕ್ತಿ ತೋರಿಸಲು ಹೊರಟ ಎಂ.ಬಿ.ಪಾಟೀಲ್‌‌!

5:47 PM, Friday, June 8th, 2018
Share
1 Star2 Stars3 Stars4 Stars5 Stars
(2 rating, 1 votes)
Loading...

M-B-Patelಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಅತೃಪ್ತಿ ದಿಲ್ಲಿಗೆ ಶಿಫ್ಟ್ ಆಗಿದೆ. ಅತೃಪ್ತ ಶಾಸಕರ ಗುಂಪು ದಿಲ್ಲಿಗೆ ತೆರಳಲು ಸಜ್ಜಾಗಿತ್ತು. ಆದರೆ ಹೈಕಮಾಂಡ್ ಬುಲಾವ್ ಮೇರೆಗೆ ಎಂ.ಬಿ.ಪಾಟೀಲ್ ಒಬ್ಬರೇ ಸಂಜೆ 5.30ರ ವಿಮಾನದಲ್ಲಿ ದಿಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಮೊದಲ ಹಂತದಲ್ಲಿ ಸಚಿವ ಸ್ಥಾನ ಸಿಗದಿರುವುದಕ್ಕೆ ಮುನಿಸಿಕೊಂಡಿರುವ ಎಂ.ಬಿ.ಪಾಟೀಲ್ ಸದ್ಯ ಡಿಸಿಎಂ ಹುದ್ದೆ ಸೃಷ್ಟಿಸಿ ನೀಡುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಇದರಿಂದಲೇ ಇಂದು ಬಂದ ರಾಜ್ಯ ನಾಯಕರಿಗೆ ಕೂಡ ಅವರು ಸೊಪ್ಪು ಹಾಕಿಲ್ಲ. ಅಲ್ಲದೇ ಹೈಕಮಾಂಡ್ ನಾಯಕರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ. ಇದಕ್ಕೆ ಕೊನೆಗೂ ಮಣಿದಿರುವ ಕಾಂಗ್ರೆಸ್ ಹೈಕಮಾಂಡ್ ಮಾತುಕತೆಗೆ ಆಹ್ವಾನಿಸಿದೆ ಎನ್ನಲಾಗಿದೆ.

ಎಂ.ಬಿ.ಪಾಟೀಲ್ ನೇತ್ರತ್ವದಲ್ಲಿ 20 ಶಾಸಕರ ತಂಡ ರಚನೆಯಾಗಿದೆ ಎನ್ನಲಾಗುತ್ತಿದೆ. ಸದ್ಯ ತಂಡದ ನೇತೃತ್ವ ಎಂ‌.ಬಿ.ಪಾಟೀಲ್ ವಹಿಸಿದ್ದಾರೆ. ಉಳಿದಂತೆ ತಂಡದಲ್ಲಿ ಸತೀಶ್ ಜಾರಕಿಹೊಳಿ, ಎಂಟಿಬಿ ನಾಗರಾಜ್ , ಎನ್.ಎ.ಹ್ಯಾರೀಸ್, ಡಾ. ಸುಧಾಕರ್, ಬಿ.ಸಿ.ಪಾಟೀಲ್, ಹೆಚ್.ಕೆ.ಪಾಟೀಲ್, ಈಶ್ವರ್ ಖಂಡ್ರೆ, ಸಿ.ಎಸ್.ಶಿವಳ್ಳಿ, ರಘುಮೂರ್ತಿ, ರೋಷನ್ ಬೇಗ್, ಎಚ್ ಎಂ.ರೇವಣ್ಣ, ಸಂಗಮೇಶ್, ತುಕಾರಂ, ಪಿ.ಟಿ‌.ಪರಮೇಶ್ವರ್ ನಾಯ್ಕ್, ನಾಗೇಂದ್ರ, ವಿ.ಮುನಿಯಪ್ಪ, ಶಿವರಾಂ ಹೆಬ್ಬಾರ್, ಭೀಮಾ ನಾಯ್ಕ್, ಬಿ.ನಾರಾಯಣ್ ಇದ್ದಾರೆ ಎನ್ನಲಾಗಿದೆ. ಜೂ. 13ರಂದು ಇವರೆಲ್ಲಾ ಸಭೆ ಸೇರಲು ನಿರ್ಧರಿಸಿದ್ದಾರೆ. ಇದಕ್ಕೆ ಮುನ್ನವೇ ಇದೀಗ ಹೈಕಮಾಂಡ್ ಕರೆ ಬಂದಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English