ರಾಷ್ಟ್ರಪತಿ ಭವನದ ವಸತಿ ಗೃಹದಲ್ಲಿ ಶವವಾಗಿ ಉದ್ಯೋಗಿ ಮೃತದೇಹ ಪತ್ತೆ

6:22 PM, Friday, June 8th, 2018
Share
1 Star2 Stars3 Stars4 Stars5 Stars
(No Ratings Yet)
Loading...

raj-bhavanನವದೆಹಲಿ: ರಾಷ್ಟ್ರಪತಿ ಭವನದ ಕೆಲಸಗಾರರ ವಸತಿಗೃಹದಲ್ಲಿ ಉದ್ಯೋಗಿಯೊಬ್ಬನ ಶವ ಪತ್ತೆಯಾಗಿದ್ದು, ಆತ ರಾಷ್ಟ್ರಪತಿ ಭವನದಲ್ಲಿ 4ನೇ ದರ್ಜೆಯ ಕೆಲಸಗಾರನಾಗಿದ್ದ ಎಂದು ತಿಳಿದು ಬಂದಿದೆ.

ಮೃತನನ್ನು ತ್ರಿಲೋಕಚಂದ್ರ ಎಂದು ಗುರುತಿಸಲಾಗಿದೆ. ಆತ ಕೆಲ ಸಮಯದಿಂದ ಅನಾರೋಗ್ಯ ಪೀಡಿತನಾಗಿದ್ದ ಎಂದು ತಿಳಿದು ಬಂದಿದೆ. ಬಂದಿದೆ. ಆತನ ಕೊಠಡಿಯಿಂದ ಕೆಟ್ಟ ವಾಸನೆ ಬರುತ್ತಿದ್ದು, ಈ ಬಗ್ಗೆ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಒಳಗಿಂದ ಹಾಕಲಾಗಿದ್ದ ಚಿಲಕ ಒಡೆದು ಕೋಣೆಯ ಕದ ತೆಗೆದಾಗ ಆತ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕವೇ ಸಾವಿಗೆ ಕಾರಣವೇನೆಂದು ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English