ಜಿಲ್ಲೆಯ ಸೋತ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿ ಸಚಿವ ಯು.ಟಿ.ಖಾದರ್ ಮಾತುಕತೆ

4:06 PM, Sunday, June 10th, 2018
Share
1 Star2 Stars3 Stars4 Stars5 Stars
(No Ratings Yet)
Loading...

ut-kadher ಮಂಗಳೂರು: ನೂತನ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಭಾನುವಾರ  ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದ.ಕ.ಜಿಲ್ಲೆಯ 8 ಕ್ಷೇತ್ರಗಳಲ್ಲಿ 6 ಮಂದಿ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದವರು ಸೋಲನುಭವಿಸಿದರು. ಯುಟಿ ಖಾದರ್ ಒಬ್ಬರೇ ಗೆದ್ದು ಕಾಂಗ್ರೆಸ್ಸಿನ ಮಾನ ಉಳಿಸಿದ್ದರು.

ಬಂಟ್ವಾಳ ಶಾಸಕರಾಗಿದ್ದ ಬಿ. ರಮಾನಾಥ ರೈ, ಮೂಡಬಿದ್ರೆ ಶಾಸಕರಾಗಿದ್ದ ಅಭಯಚಂದ್ರ ಜೈನ್, ಬೆಳ್ತಂಗಡಿ ಶಾಸಕರಾಗಿದ್ದ ವಸಂತ ಬಂಗೇರ, ಪುತ್ತೂರು ಶಾಸಕಿಯಾಗಿದ್ದ ಶಕುಂತಳಾ ಟಿ. ಶೆಟ್ಟಿ ಅವರನ್ನು ನಿವಾಸಕ್ಕೆ ತೆರಳಿ ರಾಜ್ಯ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾದ ಯು.ಟಿ.ಖಾದರ್ ಮಾತುಕತೆ ನಡೆಸಿದರು.

ಮಂಗಳೂರು ದಕ್ಷಿಣ ಶಾಸಕರಾಗಿದ್ದ ಜೆ.ಆರ್.ಲೋಬೋ ಅವರು ಶನಿವಾರ ವಿಜಯೋತ್ಸವ ಸಂದರ್ಭ ಜೊತೆಗಿದ್ದು ಸಮಾಲೋಚನೆ ನಡೆಸಿದ್ದರು. ಮಂಗಳೂರು ಉತ್ತರ ಶಾಸಕರಾಗಿದ್ದ ಮೊಯ್ದಿನ್ ಬಾವಾ ಪವಿತ್ರ ಮಕ್ಕಾ ಯಾತ್ರೆಯಲ್ಲಿರುವುದರಿಂದ ಅವರನ್ನು ಭೇಟಿಯಾಗಲಾಗಿಲ್ಲ.

Ut kader

ಇದೇ ಸಂದರ್ಭ ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರೊಂದಿಗೆ ಮಾತುಕತೆ ನಡೆಸಿದರು.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಸಚಿವ ಖಾದರ್‌ಗೆ ಸಾಥ್‌‌ ನೀಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English