ಕೆಎಸ್ಆರ್ ಟಿಸಿ ದುಸ್ಥಿತಿಯನ್ನು ಬೆಳಕಿಗೆ ತಂದ ಚಾಲಕ ರಮೇಶ್ ಗೆ ಧಮ್ಕಿ

12:06 PM, Monday, June 11th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Ramesh Ksrtcಮಂಗಳೂರು : ಕೆಎಸ್ಆರ್ ಟಿಸಿ ಚಾಲಕ ರು ಪಡುವ ಕಷ್ಟವನ್ನು ಸಾರ್ವಜನಿಕರ ಗಮನಕ್ಕೆ ತಂದ ಕೆಎಸ್ ಆರ್ ಟಿಸಿ ಚಾಲಕನಿಗೆ ಆಡಳಿತ ಮಂಡಳಿ ಮಾನಸಿಕವಾಗಿ ಕಿರುಕುಳ ನೀಡ್ತಿರುವ ಸುದ್ದಿ ಹೊರಬಿದ್ದಿದೆ. ಧರ್ಮಸ್ಥಳ ಡಿಪೋಗೆ ಸೇರಿದ ಬಸ್ ಚಾಲಕ ರಮೇಶ್, ತಮಗೆ ಅಧಿಕಾರಿಗಳು ನೀಡ್ತಿರುವ ಬಸ್ ಗಳ ಶೋಚನೀಯ ಅವಸ್ಥೆಯನ್ನು ದೃಶ್ಯ ಸಮೇತ ಮೊಬೈಲ್ ನಲ್ಲಿ ಸೆರೆ ಹಿಡಿದು ಚಾಲಕ ಸಮೂಹಕ್ಕೆ ಕಳುಹಿಸಿದ್ದರು. ಇದರಿಂದ ಎಚ್ಚೆತ್ತುಕೊಂಡು ಆಗಿರುವ ಸಮಸ್ಯೆಗೆ ಪರಿಹಾರ ಕೊಡುವ ಬದಲುರಮೇಶ್ ವಿರುದ್ದ ಸೇಡಿನ ಕ್ರಮ ಕೈಗೊಂಡಿದ್ದಾರೆ. ರಮೇಶ್ ಅವರನ್ನು ಡಿಪೋದಲ್ಲಿ ಕೂಡಿ ಹಾಕಿ ವಿಚಾರಣೆ ನಡೆಸಿ ಮಾನಸಿಕ ಕಿರುಕುಳ ನೀಡಿದ್ದಾರೆ.

ಒಂದೆರೆಡು ದಿನ ಕೆಲಸವನ್ನೇ ಕೊಡ್ದೆ ಡಿಪೋದಲ್ಲಿ ಸುಮ್ಮನೆ ಕೂರಿಸಿದ್ದಾರೆ. ನೋಟೀಸ್ ನೀಡಿದ್ದಾರೆ. ಸಾಲದಕ್ಕೆ ಇವತ್ತು ಬೆಳಗ್ಗೆ ಗೊತ್ತಿಲ್ಲದ ರೂಟ್ ಗೆ ಬಸ್ಸನ್ನು ಕೊಟ್ಟು ಕಳುಹಿಸಿದ್ದಾರೆ. ಅರಣ್ಯ ಮಧ್ಯೆ ಬಸ್ ತೆರಳುವಾಗ ಬಸ್ ನಿಲ್ಲಿಸಿ ಹತ್ತಿಕೊಂಡು ತಮ್ಮನ್ನು ಕೆಎಸ್ ಆರ್ ಟಿಸಿ ಚೆಕ್ಕಿಂಗ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡ ಇಬ್ಬರು ಇಲಾಖೆಯ ಮಾನ ಕಳೀತಿಯಾ ಎಂದು ಅಬ್ಬರಿಸಿದ್ದಾರೆ.ಸಾಲದ್ದಕ್ಕೆ ಹಲ್ಲೆಗೂ ಮುಂದಾಗಿದ್ದಾರೆ.ಬಸ್ ನಿಲ್ಲಿಸಿ ಕೆಳಗಿಳಿಯುವಂತೆ ಕಿರುಕುಳ ನೀಡಿದ್ದಾರೆ.

Ramesh Ksrtcಇದರಿಂದ ಬೇಸತ್ತ ರಮೇಶ್ ಮಾರ್ಗ ಮಧ್ಯೆಯೆ ಕಣ್ಣೀರಿಡಲು ಶುರುಮಾಡಿದ್ದಾರೆ. ಚಾಲಕನ ಮೇಲೆ ಸಿಬ್ಬಂದಿ ನಡೆಸ್ತಿರೋ ದೌರ್ಜನ್ಯಕ್ಕೆ ಪ್ರಯಾಣಿಕರೇ ಆಕ್ರೋಶಗೊಂಡು ಅವರ ಮೇಲೆ ತಿರುಗಿಬಿದ್ದು ಚಾಲಕ ರಮೇಶ್ ಅವರನ್ನು ಸಮಾಧಾನ ಮಾಡಿದ್ದಾರೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸಬೇಕಾದ ಬಸ್ ಗಳ ಕಂಡೀಷನ್ ಸರಿಯಾಗಿರಬೇಕು. ಆದ್ರೆ ಅತ್ಯಂತ ಶೋಚನೀಯ ಸ್ಥಿತಿಯ ಬಸ್ ಗಳನ್ನು ಬೇಡ ಎಂದರು ಬೈಯ್ದು ತೆಗೆದುಕೊಂಡು ಹೋಗುವಂತೆ ಟಾರ್ಚರ್ ಕೊಡುವ ಅಧಿಕಾರಿಗಳ ದೌರ್ಜನ್ಯವನ್ನು ರಮೇಶ್ ಬೆತ್ತಲು ಮಾಡಿದ್ದೇ ಇದೀಗ ಅವರ ಉದ್ಯೋಗಕ್ಕೆ ಕುತ್ತು ತರುವಂತಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English