ತುಳು ಚಿತ್ರ ನಟನಿಂದ ಬಂಟ್ವಾಳ ಬಿಜೆಪಿ ಕಾರ್ಯಕರ್ತರ ಮೇಲೆ ತಲವಾರು ದಾಳಿ

6:53 PM, Monday, June 11th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

surendra Bantwalaಮಂಗಳೂರು :  ಬಿಜೆಪಿ ಕಾರ್ಯಕರ್ತರ ಮೇಲೆ ಚಿತ್ರ ನಟ ಸುರೇಂದ್ರ ಬಂಟ್ವಾಳ ತಲವಾರು ಬೀಸಿ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ಸಮೀಪದ ಬಡ್ಡಕಟ್ಟೆ ಎಂಬಲ್ಲಿ ನಡೆದಿದೆ.

ಬಿಜೆಪಿ ಕಾರ್ಯಕರ್ತರಾದ ಗಣೇಶ್ ಮತ್ತು ಪುಷ್ಪರಾಜ್ ಅವರ ಮೇಲೆ ತಲವಾರ್‌ ಬೀಸಿದ್ದು, ಇದರಿಂದ ಗಾಯಗೊಂಡ ಅವರು ಚಿಕಿತ್ಸೆಗಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಬಳಿಕ ಆರೋಪಿ ಸುರೇಂದ್ರ ಬಂಟ್ವಾಳ ತಲೆಮರೆಸಿಕೊಂಡಿದ್ದಾನೆ.

ಸೋಮವಾರ ಮಧ್ಯಾಹ್ನ ಸುಮಾರು ಒಂದು ಗಂಟೆಯ ವೇಳೆಗೆ ಬಿಜೆಪಿ ಕಾರ್ಯಕರ್ತರಾದ ಗಣೇಶ್, ಚರಣ್, ಪುಷ್ಪರಾಜ್ , ಮತ್ತಿತರರು ಬಡ್ಡಕಟ್ಟೆ ಹೋಟೆಲೊಂದಕ್ಕೆ ಊಟಕ್ಕೆ ತೆರಳಿದ ವೇಳೆ ಸುರೇಂದ್ರ ಮತ್ತು ಅವರ ತಂಡ ಕಾರಿನಿಂದಿಳಿದು ತಲವಾರು ಹಿಡಿದು ಹೋಟೆಲ್‌ಗೆ ಬಂದು ಊಟಕ್ಕೆ ಕುಳಿತಿದ್ದ ಬಿಜೆಪಿ ಕಾರ್ಯಕರ್ತರಿಗೆ ಅವಾಚ್ಯ ಶಬ್ದಗಳಿಂದ ಬೈದು‌ ಹಲ್ಲೆ ನಡೆಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.

ಆರೋಪಿ ಸುರೇಂದ್ರ ಬಂಟ್ವಾಳನ ತಂಡದ ಯುವಕನಿಗೆ ಬಿಜೆಪಿ ಯುವಕರು ಫೇಸ್‌‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ್ದ ಎಂಬ ಕಾರಣಕ್ಕೆ ಸೆಲೂನ್‌ಗೆ ನುಗ್ಗಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಹಲ್ಲೆಗೊಳಗಾದ ಯುವಕ ದೀಕ್ಷಿತ್ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಈ ಬಗ್ಗೆ ಭುವಿತ್ ಮತ್ತು ಆತನ ಸಹಚರರು ಹಲ್ಲೆ ನಡೆಸಿದ್ದಾರೆ ಎಂದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದರ ಮುಂದುವರಿದ ಭಾಗವಾಗಿ ಇವತ್ತು ತಲಾವರ್‌ ಬೀಸಲಾಗಿದೆಯೋ ಅಥವಾ ಬೇರೆ ಕಾರಣಗಳಿದೆಯೋ ಎನ್ನುವುದು ತನಿಖೆಯ ಬಳಿಕ ತಿಳಿಯಬೇಕಾಗಿದೆ.

ಮಾಜಿ ಸಚಿವ ರಮನಾಥ ರೈ ಆಪ್ತನಾಗಿರುವ ಸುರೇಂದ್ರ ಬಂಟ್ವಾಳ  ಈ ಹಿಂದೆ ಹಿಂದೂ ಸಂಘಟನೆಯಲ್ಲೂ ಗುರುತಿಸಿ ಕೊಂಡಿದ್ದ. ಪ್ರಸ್ತುತ ಸಂಘಟನೆಯ ಜೊತೆ ಮುನಿಸಿಕೊಂಡು ಕಾಂಗ್ರೆಸ್ ಪಕ್ಷ ಸೇರಿದ್ದ . ಇತ್ತೀಚಿಗೆ ತುಳು ಚಲನಚಿತ್ರದಲ್ಲಿಯೂ ನಟಿಸಿದ್ದ.

         

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English