ಜಿಲ್ಲಾಡಳಿತದ, ನಗರಪಾಲಿಕೆಯ ದೂರದೃಷ್ಟಿಯ ಕೊರತೆಯೆ ಈ ಸ್ಥಿತಿಗೆ ಕಾರಣ: ದಯಾನಂದ ಶೆಟ್ಟಿ

12:31 PM, Tuesday, June 12th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

federationಮಂಗಳೂರು: ಮೊನ್ನೆ ಮುಂಗಾರು ಮಳೆ ಆರಂಭಗೊಂಡ ಗಂಟೆಯೊಳಗಡೆ ಮಂಗಳೂರಿನಲ್ಲಿ ಪ್ರವಾಹ ಬಂದು ನೂರಾರು ಮನೆಗಳು ಮುಳುಗಿರುವುದು, ರಸ್ತೆಗಳು ಜಲಾವೃತಗೊಂಡು ಅಪಾಯಕಾರಿ ಸ್ಥಿತಿ ನಿರ್ಮಾಣಗೊಂಡಿರುವುದು ಆತಂಕದ ಸಂಗತಿ.

ನೀರು ಹರಿಯುವ ಕಾಲುವೆ, ತೋಡುಗಳ ಅತಿಕ್ರಮಣ, ರಸ್ತೆ , ಲೇಔಟ್, ಕಟ್ಟಡಗಳ ನಿರ್ಮಾಣ ಸಹಿತ ಅಭಿವೃದ್ದಿ ಕಾಮಗಾರಿಗಳ ಸಂದರ್ಭದ ದೂರದೃಷ್ಟಿಯ ಕೊರತೆ, ಮಳೆಗಾಲವನ್ನು ಎದುರಿಸುವ ಸಿದ್ಧತೆಯನ್ನು ನಗರ ಪಾಲಿಕೆ ಕೇವಲ ಮಾತಿಗಷ್ಟೆ ಸೀಮಿತಗೊಳಿಸಿರುವುದು ಮಂಗಳೂರಿನ ಇಂದಿನ ದಯನೀಯ ಸ್ಥಿತಿಗೆ ಕಾರಣ ಎಂದು ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ದಯಾನಂದ ಶೆಟ್ಟಿ ಇಂದು ಡಿವೈಎಫ್ಐ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಬಾರಿಯ ಮಳೆಗೆ ಅತಿಹೆಚ್ಚು ಹಾನಿ ಸಂಭವಿಸಿರುವುದು ನಾಲ್ಕು ಪಥವಾಗಿ ಪರಿವರ್ತನೆಗೊಂಡಿರುವ ರಾಷ್ಟ್ರೀಯ ಹೆದ್ದಾರಿಯ ಭಾಗಗಳಲ್ಲಿ; ಹಾಗೂ ಇತ್ತೀಚಿನ ವರ್ಷಗಳಲ್ಲಿ ಬೆಳವಣಿಗೆ ಕಂಡಿರುವ ನಗರದ ಹೊರವಲಯಗಳಲ್ಲಿ. ಹೆದ್ದಾರಿ ಅಭಿವೃದ್ದಿಯ ಸಂದರ್ಭ ನಡೆಸಿದ ಅವೈಜ್ಞಾನಿಕವಾಗಿ ಕಾಮಗಾರಿ, ನಗರದ ಹೊರವಲಯದ ಕೃಷಿಭೂಮಿ, ನೀರು ನಿಲ್ಲುವ ತಗ್ಗು ಪ್ರದೇಶದ ಮೈದಾನಗಳು, ರಾಜಾಕಾಲುವೆ, ತೋಡುಗಳನ್ನು ರಿಯಲ್ ಎಸ್ಟೇಟ್ ಲಾಬಿಗಳು ಬೇಕಾಬಿಟ್ಟಿ ಮಣ್ಣುತುಂಬಿ ಲೇಔಟ್ ಗಳನ್ನಾಗಿ ಪರಿವರ್ತಿಸಿರುವುದು, ವಸತಿ ಸಂಕೀರ್ಣ ನಿರ್ಮಿಸಿರುವುದು ಒಂದು ಜಡಿಮಳೆಗೆ ಮಂಗಳೂರು ತತ್ತರಗೊಳ್ಳಲು ಕಾರಣ.

federation-2ಜಿಲ್ಲಾಡಳಿತದ, ನಗರಪಾಲಿಕೆಯ ದೂರದೃಷ್ಟಿಯ ಕೊರತೆಯೆ ಈ ಸ್ಥಿತಿಗೆ ಕಾರಣ: ದಯಾನಂದ ಶೆಟ್ಟಿ ರಸ್ತೆಗಳನ್ನು; ಮುಖ್ಯವಾಗಿ ಲೇಔಟ್, ಮನೆ ನಿವೇಶನಗಳನ್ನು ಸಿದ್ದಪಡಿಸುವಾಗ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆಗಳು ನಿರ್ಮಾಣಗೊಳ್ಳುವಂತೆ ಪಾಲಿಕೆ ಖಾತರಿ ಪಡಿಸಿದ್ದರೆ, ತೋಡು – ರಾಜಾಕಾಲುವೆಗಳು ಅತಿಕ್ರಮಣಗೊಳ್ಳುವುದನ್ನು ತಡೆದಿದ್ದರೆ ಇಂದು ಇಂತಹ ಸ್ಥಿತಿ‌ ಉದ್ಭವಗೊಳ್ಳುತ್ತಿರಲಿಲ್ಲ.

ಈ ಕುರಿತು ಹಿಂದೆ ಡಿವೈಎಫ್ ಐ ಸಹಿತ ನಾಗರಿಕ ಸಂಘಟನೆಗಳು ಜಿಲ್ಲಾಡಳಿತಕ್ಕೆ ಹಲವು ದೂರುಗಳನ್ನು ಸಲ್ಲಿಸಿದ್ದವು. ಆದರೆ ಭೂಮಾಫಿಯಾ, ರಿಯಲ್ ಎಸ್ಟೇಟ್ ಲಾಬಿಗಳೊಂದಿಗೆ ಶಾಮೀಲಾದ ಭ್ರಷ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಎಲ್ಲಾ ಅಕ್ರಮಗಳನ್ನು ತಪ್ಪಾದ ದಾರಿಯಲ್ಲಿ ಮುಚ್ಚಿಹಾಕಿದ್ದರು. ಕೊಟ್ಟಾರ ಚೌಕಿ ಭಾಗದಲ್ಲಿ ಇಂತಹ ಬಹುದೊಡ್ಡ ಅಕ್ರಮದ ವಿರುದ್ದ ಹಲವು ಬಾರಿ ಧ್ವನಿ ಎತ್ತಿದ್ದರೂ ನಮ್ಮ ದೂರುಗಳನ್ನ ಕಡೆಗಣಿಸಲಾಗಿತ್ತು.

ಇಂದು ಅದೇ ಪ್ರದೇಶದಲ್ಲಿ ಅತಿಹೆಚ್ಚು ಹಾನಿ‌ ಸಂಭವಿಸಿದೆ. ಇಂತಹ ಅಕ್ರಮಗಳ ಕುರಿತು ಸರಕಾರ ನ್ಯಾಯಯುತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮಕೈಗೊಂಡು ಭವಿಷ್ಯದಲ್ಲಿ ಇಂತಹ ದುಬಾರಿ ತಪ್ಪುಗಳು ಆಗದಂತೆ ನಿಗಾವಹಿಸಬೇಕೆಂದು ಹೇಳಿದರು.

ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾದ್ಯಕ್ಷರಾದ ಬಿಕೆ ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಸ್ಥಳೀಯ ಮುಖಂಡರಾದ ಚರಣ್ ಶೆಟ್ಟಿ, ಸಂತೋಷ್ ಡಿಸೋಜ, ಅನಿಲ್ ,ಕಲಿಲ್, ನೌಶದ್ ಬಾವು, ಸೌಮ್ಯ‌ ಮುಂತಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English