ಹಾರ ತುರಾಯಿಗಳ ಸನ್ಮಾನ ಸಾರ್ಥಕತೆಯನ್ನು ಪಡೆಯುವುದು ಕಡಿಮೆ : ಶಾಸಕ ವೇದವ್ಯಾಸ ಕಾಮತ್

5:51 PM, Tuesday, June 12th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

chetana-schoolಮಂಗಳೂರು : ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮತ್ತು ಭುವನೇಂದ್ರ ಸ್ವಾಮಿ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಬ್ಯಾಂಕ್ ಜಂಟಿಯಾಗಿ ಮಂಗಳೂರು ನಗರ ದಕ್ಷಿಣದ ನೂತನ ಶಾಸಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಸೋಮವಾರ ಬೆಳಿಗ್ಗೆ ಹಮ್ಮಿಕೊಂಡಿತ್ತು.

ಮಂಗಳೂರಿನ ವಿಠೋಭ ದೇವಸ್ಥಾನ ರಸ್ತೆಯಲ್ಲಿರುವ ಚೇತನಾ ವಿಶೇಷ ಮಕ್ಕಳ ಶಾಲೆಯಲ್ಲಿ ಏರ್ಪಡಿಸಿದ್ದ ಈ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಮೂಲಕ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಮಾಜಕ್ಕೆ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ.

ಸಾಮಾನ್ಯವಾಗಿ ಯಾವುದೇ ಸನ್ಮಾನ ಕಾರ್ಯಕ್ರಮ ಹಾರ ತುರಾಯಿಗಳ ಅಬ್ಬರದಲ್ಲಿಯೇ ಕಳೆದು ಹೋಗಿ ಸಾರ್ಥಕತೆಯನ್ನು ಪಡೆಯುವುದು ಕಡಿಮೆ. ನೆನಪಿನಲ್ಲಿ ಉಳಿಯುವ ವಿಶೇಷತೆ ಕೂಡ ಅದಕ್ಕೆ ಇರುವುದಿಲ್ಲ. ಆದರೆ ಇವತ್ತು ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಆತ್ಮತೃಪ್ತಿ ಇತ್ತು. ಸಾರ್ಥಕತೆಯ ಛಾಯೆ ಇತ್ತು. ಅದು ಕೇವಲ ಸನ್ಮಾನ ಕಾರ್ಯಕ್ರಮವಾಗಿರಲಿಲ್ಲ. ಚೇತನಾ ಶಾಲೆಯ ಮಕ್ಕಳಲ್ಲಿ ಖುಷಿಯನ್ನು ಕಾಣುವ ಗುರಿ ಇತ್ತು. ಅಲ್ಲಿನ ಹಿರಿಯರ ಮುಖದಲ್ಲಿ ನಗು ತರುವ ಪ್ರಯತ್ನ ಇತ್ತು. ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಮತ್ತು ಭುವನೇಂದ್ರ ಸ್ವಾಮಿ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿ ಬ್ಯಾಂಕ್ ಪದಾಧಿಕಾರಿಗಳು ಮತ್ತು ಸಹೃದಯಿಗಳು ಚೇತನಾ ಶಾಲೆಗೆ ಆರ್ಥಿಕ ನೆರವು ನೀಡುವ ಚಿಂತನೆಯನ್ನು ಶಾಸಕ ಡಿ ವೇದವ್ಯಾಸ ಕಾಮತ್ ಅವರ ಕೈಯಲ್ಲಿ ಶಾಲೆಗೆ ಚೆಕ್ ಹಸ್ತಾಂತರಿಸುವ ಈಡೇರಿಸಿದರು. ಆ ಆರ್ಥಿಕ ನೆರವನ್ನು ಚೇತನಾ ಶಾಲೆ ತನ್ನ ಮಕ್ಕಳ ಅಗತ್ಯಕ್ಕಾಗಿ ಭವಿಷ್ಯದಲ್ಲಿ ಬಳಸುವಾಗ ಸನ್ಮಾನ ಕಾರ್ಯಕ್ರಮಕ್ಕೂ ಅರ್ಥ ಬರಲಿದೆ ಎಂದು ವೇದವ್ಯಾಸ ಕಾಮತ್ ಹೇಳಿದ್ದಾರೆ .

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English