ಮಂಗಳೂರು : ಬಾರಿ ಮಳೆಯಿಂದ ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡು ಕುಸಿದು ಬಿದ್ದು ಸೋಮವಾರ ಸಂಜೆ ಯಿಂದ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು, ಸಂಕಷ್ಟದಲ್ಲಿದ್ದ ಪ್ರಯಾಣಿಕರ ನೆರವಿಗೆ ನಿಂತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಚಿಕ್ಕಮಂಗಳೂರು ಎಸ್ಪಿ ಅಣ್ಣಮಲೈ ಹಾಗೂ ಬೆಳ್ತಂಗಡಿ ಇನ್ಸ್‌ಫೆಕ್ಟರ್ ಸಂದೇಶ್ ಅವರಿಗೆ ಸಾರ್ವಜನಿಕ ವಲಯದಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಸೋಮವಾರ ಸಂಜೆ 6ಗಂಟೆಯಿಂದಲೂ ಚಾರ್ಮಾಡಿ 2ನೇ ತಿರುವಿನಲ್ಲಿ ಈ ಘಟನೆ ನಡೆದಿತ್ತು. 16ಕ್ಕೂ ಹೆಚ್ಚು ಗಂಟೆಗಳಿಂದ ಜನರು ಸ್ಥಳದಲ್ಲಿ ಸಿಲುಕಿಕೊಂಡಿದ್ದರು. ಘಾಟ್‌ನಲ್ಲಿ ರಸ್ತೆ ಬಿರುಕು ಬಿಟ್ಟಿರುವುದು, ಮಣ್ಣು ಕುಸಿದು ರಸ್ತೆ ಮೇಲೆ ಬಿದ್ದಿರುವುದು, ಮೇಲಿಂದ ರಭಸವಾಗಿ ನೀರು ಬೀಳುತ್ತಿರುವುದು ಜನರನ್ನು ಇನ್ನಷ್ಟು ಭೀತಗೊಳಿಸಿತ್ತು. ಮತ್ತೊಂದು ಕಡೆಯಲ್ಲಿ ರಸ್ತೆಯಲ್ಲಿ ಬಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿತ್ತು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಘಟನಾ ಸ್ಥಳಕ್ಕೆ ಆಗಮಿಸಿ ತಮ್ಮ ಕಾರ್ಯಕರ್ತರ ತಂಡದ ಜೊತೆಗೆ ಸಂಕಷ್ಟದಲ್ಲಿರುವ ಪ್ರಯಾಣಿಕರಿಗೆ ಬೆಳಗಿನಿಂದಲೇ ಕುಡಿಯುವ ನೀರು, ಹಾಲು, ಔಷಧಿ ಸುಮಾರು 2000 ಜನರಿಗೆ ಆಗುವಷ್ಟು ಮಧ್ಯಾಹ್ನದ ಊಟ ಹಾಗೂ ಬೆಳ್ಳಿಗ್ಗೆ ತಿಂಡಿಯ ವ್ಯವಸ್ಥೆಯನ್ನು ಮಾಡಿದ್ದರು.
ಬೆಳಗಿನಿಂದಲೇ ಬೆಳ್ತಂಗಡಿ ಇನ್ಸ್‌ಫೆಕ್ಟರ್ ಸಂದೇಶ್ ಅವರು ಮತ್ತು ಸಿಬ್ಬಂದಿಗಳ ತಂಡ ಬಹಳ ಅಚ್ಚುಕಟ್ಟಾಗಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ರಸ್ತೆಯ ಮಣ್ಣು ತೆರವು ಕಾರ್ಯಚರಣೆಯಲ್ಲಿ ತೊಡಗಿದ್ದರು. ಹಾಗೂ ಚಿಕ್ಕ ಮಂಗಳೂರು ಎಸ್ಪಿ ಅಣ್ಣಮಲೈ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ, ಸಂಕಷ್ಟದಲ್ಲಿದ್ದ ಪ್ರಯಾಣಿಕರ ನೆರವಿಗೆ ನಿಂತಿದ್ದರು.
Click this button or press Ctrl+G to toggle between Kannada and English