ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಆರಂಭಗೊಂಡಿದೆ. ಕ್ಷೇತ್ರದಲ್ಲಿ ನಾಲ್ಕು ಅಂಚೆ ಮತಗಳಿದ್ದು, ಮೊದಲು ಅಂಚೆ ಮತಗಳ ಎಣಿಕೆ ಕಾರ್ಯ ನಡೆಯುತ್ತಿದೆ.
ಜಯನಗರ ವಿಧಾನಸಭಾ ಕ್ಷೇತ್ರ ಫಲಿತಾಂಶ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿಗೆ ಭಾರಿ ಮುನ್ನಡೆ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ. ಮತಗಟ್ಟೆ ಬಳಿ ಪಟಾಕಿ ಸಿಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.
10ನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್‌ನ ಸೌಮ್ಯಾರೆಡ್ಡಿ ಭಾರಿ ಮುನ್ನಡೆ ಪಡೆದಿದ್ದಾರೆ. 40,677 ಮತಗಳನ್ನು ಪಡೆದಿರುವ ಸೌಮ್ಯಾರೆಡ್ಡಿ ಸುಮಾರು 15 ಸಾವಿರ ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನು ಬಿಜೆಪಿ ಪ್ರಹ್ಲಾದ್ ಬಾಬು 25,779 ಮತಗಳನ್ನು ಪಡೆದಿದ್ದು, ಭಾರಿ ಹಿನ್ನಡೆ ಅನುಭವಿಸಿದ್ದಾರೆ. ಇನ್ನು ಪಕ್ಷೇತರ ರವಿಕೃಷ್ಣಾರೆಡ್ಡಿಗೆ 950 ಮತಗಳು ಬಿದ್ದಿವೆ. ನೋಟಾ ಮತಗಳು 434ಕ್ಕೆ ತಲುಪಿವೆ.
9ನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್‌ನ ಸೌಮ್ಯಾರೆಡ್ಡಿ 37,288 ಮತಗಳು ಪಡೆದಿದ್ದು, ಮುನ್ನಡೆಯಲ್ಲಿದ್ದಾರೆ. ಬಿಜೆಪಿ ಪ್ರಹ್ಲಾದ್ ಬಾಬು 21,994 ಮತಗಳು ಬಿದ್ದಿದ್ದು, ಹಿನ್ನಡೆ ಅನುಭವಿಸಿದ್ದಾರೆ. ಪಕ್ಷೇತರ ರವಿಕೃಷ್ಣಾರೆಡ್ಡಿಗೆ 843 ಮತಗಳು ಬಿದ್ದಿವೆ. ನೋಟಾ ಮತಗಳು 378 ಬಿದ್ದಿವೆ.
8ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು, ಬಿಜೆಪಿಗೆ 21,437 ಮತಗಳು ಬಿದ್ದಿವೆ. ಇತ್ತ ಕಾಂಗ್ರೆಸ್‌ಗೆ 31,642 ಮತಗಳು ಬಿದ್ದಿದ್ದು, ಬಿಜೆಪಿಗಿಂತ ಕಾಂಗ್ರೆಸ್ 10 ಸಾವಿರಕ್ಕೂ ಅಧಿಕ ಮತಗಳಿಂದ ಮುನ್ನಡೆ ಕಾಯ್ದುಕೊಂಡಿದೆ. ಪಕ್ಷೇತರ ಅಭ್ಯರ್ಥಿ ರವಿಕೃಷ್ಣ 809 ಮತಗಳನ್ನು ಪಡೆದಿದ್ದು, ನೋಟಾ ಮತಗಳ ಸಂಖ್ಯೆ 361ಕ್ಕೆ ತಲುಪಿದೆ.
7ನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್‌ಗೆ ಕಾಂಗ್ರೆಸ್-27,195 ಮತ್ತು ಬಿಜೆಪಿಗೆ 19,873 ಮತಗಳು ಬಿದ್ದಿವೆ. ಪಕ್ಷೇತರ ಅಭ್ಯರ್ಥಿ ರವಿಕೃಷ್ಣ 776 ಮತಗಳನ್ನು ಪಡೆದಿದ್ದಾರೆ. ನೋಟಾ ಮತಗಳು 341 ಬಿದ್ದಿವೆ.
6ನೇ ಸುತ್ತಿನ ಎಣಿಕೆಯಲ್ಲಿಯೂ ಕಾಂಗ್ರೆಸ್ ಮುನ್ನಡೆ ಕಾಯ್ದಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ 22,356 ಮತಗಳನ್ನು ಪಡೆದಿದ್ದರೇ, ಇತ್ತ ಬಿಜೆಪಿ ಅಭ್ಯರ್ಥಿ 18,813 ಮತಳನ್ನು ಪಡೆದಿದ್ದಾರೆ. ಇನ್ನು ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿಗೆ 735 ಮತಗಳು ಬಿದ್ದವೆ. ನೋಟಾ ಮತಗಳು 304 ಬಿದ್ದಿವೆ.
5 ನೇ ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, 5 ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್‌ನ ಸೌಮ್ಯಾರೆಡ್ಡಿ 17923, ಬಿಜೆಪಿ ಪ್ರಹ್ಲಾದ್ ಬಾಬು 16331, ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿಗೆ 645 ಮತಗಳು ಬಿದ್ದಿವೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, 1592 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದು, ಒಟ್ಟು ಎಣಿಕೆಯಾದ ಮತ 35,922 ಆಗಿದೆ.
4ನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 16438 ಮತಗಳು, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು 11090 ಮತಗಳನ್ನು ಪಡೆದಿದ್ದಾರೆ.
3ನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಯನ್ನು ಹಿಂದಿಕ್ಕಿ ಕಾಂಗ್ರೆಸ್ ಮುನ್ನುಗ್ಗುತ್ತಿದೆ. ಕಾಂಗ್ರೆಸ್ 11,494 ಮತಗಳನ್ನು ಗಳಿಸಿ ಮುನ್ನಡೆ ಪಡೆದಿದೆ. ಬಿಜೆಪಿ8,617 ಮತ ಹಾಗೂ ರವಿಕೃಷ್ಣರೆಡ್ಡಿ 384 ಮತ ಪಡೆದಿದ್ದಾರೆ.
2 ನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ 6453 ಮತಗಳನ್ನು ಪಡೆದಿದ್ದು, ಹಿನ್ನಡೆ ಸಾಧಿಸಿದೆ. ಕಾಂಗ್ರೆಸ್ 6719 ಮತಗಳನ್ನು ಪಡೆದಿದ್ದು, ಮುನ್ನಡೆ ಕಾಯ್ದುಕೊಂಡಿದೆ. ಇನ್ನು ರವಿಕೃಷ್ಣರೆಡ್ಡಿ 281 ಮತ ಪಡೆದಿದ್ದಾರೆ.
ಮೊದಲ ಸುತ್ತಿನ ಮತ ಎಣಿಕೆ ಅಂತ್ಯಗೊಂಡಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್‌ನ ಸೌಮ್ಯಾರೆಡ್ಡಿಗೆ 3749 ಮತಗಳು ಬಿದ್ದಿವೆ. ಇನ್ನು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬುಗೆ 3322 ಮತಗಳು ಬಿದ್ದಿವೆ.
ಅಂಚೆಮತದಲ್ಲಿ ಬಿಜೆಪಿ 3 ಮತಗಳು ಪಡೆದು ಮುನ್ನಡೆಯಲ್ಲಿದ್ದು, ಕಾಂಗ್ರೆಸ್ 1 ಪಡೆದು ಹಿನ್ನಡೆ ಅನುಭವಿಸಿದೆ ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಮತ ಎಣಿಕೆಗೆ ಚುನಾವಣೆ ಸಿಬ್ಬಂದಿ ಸಕಲ ಸಿದ್ಧತೆ ಕೈಗೊಂಡಿದ್ದರು. ಎಸ್.ಎಸ್.ಎಂ.ಆರ್.ವಿ.ಕಾಲೇಜಿನಲ್ಲಿ ನಡೆಯುತ್ತಿರುವ ಮತ ಎಣಿಕೆ ಕಾರ್ಯ ಒಟ್ಟು 12 ಸುತ್ತು ನಡೆಯುತ್ತೆ.
ಮತ ಎಣಿಕೆಗೆ 16 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಜಯನಗರ ಚುನಾವಣೆ ಕೈ ಅಭ್ಯರ್ಥಿ ಸೌಮ್ಯಾರೆಡ್ಡಿ ಮತ್ತು ಬಿಜೆಪಿಯ ಪ್ರಹ್ಲಾದ್ ಬಾಬು ನಡುವೆ ನೇರ ಹಣಾಹಣಿ ಶುರುವಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಹೊರ ಬರಲಿದ್ದು, ಅಭ್ಯರ್ಥಿಗಳು ದೇವರ ಮೊರೆ ಹೋಗಿದ್ದಾರೆ.
Click this button or press Ctrl+G to toggle between Kannada and English