ಬೆಂಗಳೂರು: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಜಿಲ್ಲೆಯ ಆದಿಚುಂಚನಗಿರಿ ಮಠಕ್ಕೆ ಕುಮಾರಸ್ವಾಮಿ ಅವರು ಪತ್ನಿ ಅನಿತಾ ಅವರೊಂದಿಗೆ ಆಗಮಿಸಿದ್ದರು.
ಇಂದು ವಿಶೇಷ ಅಮವಾಸೆ ಪೂಜೆಯಲ್ಲಿ ಪಾಲ್ಗೊಂಡರು. ಇದಕ್ಕೂ ಮುನ್ನ ಸಿಎಂ ಅವರಿಗೆ ಶ್ರೀಮಠದಿಂದ ಮಂಗಳವಾದ್ಯ, ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ಸಚಿವ ಸಿ.ಎಸ್. ಪುಟ್ಟರಾಜು, ಶಾಸಕ ಸುರೇಶ್ ಗೌಡ, ಪರಿಷತ್ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ ಹೆಚ್‌ಡಿಕೆಗೆ ಸಾಥ್ ನೀಡಿದರು.
ಹೆಚ್‌ಡಿಕೆ ದಂಪತಿ ಮಠದಲ್ಲಿ ಶ್ರೀಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.ಅವರಿಗೆ ಸಚಿವ ಪುಟ್ಟರಾಜು ಕುಟುಂಬ, ಶಾಸಕ ಸುರೇಶ್ ಗೌಡ ಸಾಥ್ ನೀಡಿದರು.ಸ್ವತಃ ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದಲೇ ಪೂಜಾ ಕೈಂಕರ್ಯ ನೆರವೇರಿಸಲಾಯಿತು.
ಕಾಲಭೈರವೇಶ್ವರ ಪೂಜೆ ಬಳಿಕ ಕ್ಷೇತ್ರದ ದೇವತೆಗಳ ದರ್ಶನ, ಮಾಡಿಸಿದರು. ನಂತರ ಸಿಎಂ ದಂಪತಿ, ಸಚಿವ, ಶಾಸಕರಿಗೆ ಶ್ರೀಗಳು ಫಲ-ತಾಂಬೂಲ ನೀಡಿ ಆಶೀರ್ವದಿಸಿದರು.
ಈ ವೇಳೆ ಮುಖ್ಯಮಂತ್ರಿ ಅವರನ್ನು ನೋಡಲು ಮತ್ತು ಅಭಿನಂದಿಸಲು ಅಭಿಮಾನಿಗಳು, ಕಾರ್ಯಕರ್ತರು ಮತ್ತು ಭಕ್ತರು ದೇವಾಲಯದ ಬಳಿ ಜಮಾಯಿಸಿದ್ದರು. ಹೀಗಾಗಿ ಕೆಲಕಾಲ ನೂಕು ನುಗ್ಗಲು ಉಂಟಾಯಿತು. ಆಗ ಸಿಎಂ ಕುಮಾರಸ್ವಾಮಿ ಜನರತ್ತ ಕೈ ಮುಗಿದು ಕೃತಜ್ಞತೆ ಸಲ್ಲಿಸಿದರು.
Click this button or press Ctrl+G to toggle between Kannada and English