ಮುಂಬೈ: ಮಾಜಿ ಭುವನ ಸುಂದರಿ ಐಶ್ವರ್ಯ ರೈ ಅಂಧೇರಿಯ ಸೆವೆನ್ ಹಿಲ್ಸ್ ಎಂಬ ಐಷಾರಾಮಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಮಿತಾಬ್ ಕುಟುಂಬಕ್ಕೆ ಬುಧವಾರ ಪುಟ್ಟ ಅತಿಥಿಯ ಆಗಮನವಾಗಿದೆ.
ಸೋಮವಾರ ರಾತ್ರಿಯೇ ಐಶ್ವರ್ಯ ರೈ ಅವರನ್ನು ದಾಖಲಿಸಲಾಗಿತ್ತು. 11.11.11ರಂದು ಹೆರಿಗೆಯಾಗುತ್ತದೆ, ಮಕ್ಕಳ ದಿನವಾದ ನ.14ರಂದು ಆಗುತ್ತದೆ ಎಂಬೆಲ್ಲಾ ವದಂತಿ ಹಾಗೂ ಬೆಟ್ಟಿಂಗ್‌ಗಳನ್ನು ಹುಸಿಗೊಳಿಸಿ ಸಾಮಾನ್ಯ ದಿನವಾದ ಗುರುವಾರ ಹೆರಿಗೆಯಾಗಿದ್ದು ವಿಶೇಷ. ಅವಳಿ ಮಗುವಾಗುತ್ತದೆ ಎಂಬ ಜ್ಯೋತಿಷ್ಯ ಕೂಡ ಸುಳ್ಳಾಗಿದೆ.
ಐಶ್‌ಗೆ ಹೆರಿಗೆಯಾಗುತ್ತಿದ್ದಂತೆ ಪತಿ ಅಭಿಷೇಕ್ ಬಚ್ಚನ್ ‘ಹೆಣ್ಣು ಮಗು!!!! :-))))’ ಎಂದು ಟ್ವೀಟ್ ಮಾಡಿದರು. ಮಾವ ಅಮಿತಾಭ್ ಕೂಡ, ‘ತುಂಬಾ ಮುದ್ದಾದ ಹೆಣ್ಣುಮಗುವಿಗೆ ನಾನು ತಾತನಾಗಿದ್ದೇನೆ!! ದಾದಾಜಿಗೆ ಖುಷಿ ತಡೆದುಕೊಳ್ಳಲಾಗುತ್ತಿಲ್ಲ!!!’ ಎಂದು ಟ್ವೀಟ್ ಮಾಡಿದರು.
ಬುಧವಾರವಷ್ಟೇ ಅಮಿತಾಭ್ ತಾವೆಲ್ಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಟ್ವೀಟ್ ಮಾಡಿದ್ದರು. ‘ನಿರೀಕ್ಷೆಯ ದಿನ… ಆದರೆ ಮತ್ತೂಂದು ದಿನ! ದೇವರು ಒಂದು ದಿನ ನಿಗದಿಪಡಿಸಿರುತ್ತಾನೆ. ಅದು ವಿಶೇಷ ದಿನವಾಗಿರುತ್ತದೆ… ನಾವು ಕಾಯುತ್ತೇವೆ!!’
ಕಳೆದ ಜೂನ್‌ನಲ್ಲಿ ಅವರು ತಮ್ಮ ಸೊಸೆ ಗರ್ಭಿಣಿಯಾಗಿರುವ ವಿಷಯವನ್ನು ಪ್ರಕಟಿಸಿದ್ದರು.
ಐಶ್ ಬೇಬಿ ಜನನಕ್ಕೆ ಬಾಲಿವುಡ್ ಸೇರಿದಂತೆ ದೇಶದೆಲ್ಲೆಡೆಯಿಂದ ಶುಭಾಶಯ ಹರಿದುಬಂದಿದೆ. ಕರಣ್ ಜೋಹರ್, ನಿರ್ದೇಶಕ, ಬಿಪಾಶಾ ಬಸು, ಬಾಲಿವುಡ್ ನಟಿ ಜೆನೆಲಿಯಾ ಡಿಸೋಜಾ, ಬಾಲಿವುಡ್ ನಟಿ, ಶ್ರೇಯಾ ಘೋಷಾಲ್, ಹಿನ್ನೆಲೆ ಗಾಯಕಿ, ರವೀನಾ ಟಂಡನ್, ನಟಿ, ಅತುಲ್ ಕಸ್ಬೇಕರ್, ಛಾಯಾಗ್ರಾಹಕ, ಸಲಿನಾ ಜೇಟ್ಲಿ, ನಟಿ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.
Click this button or press Ctrl+G to toggle between Kannada and English