ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಇಫ್ತಾರ್ ಕೂಟ

1:51 PM, Thursday, June 14th, 2018
Share
1 Star2 Stars3 Stars4 Stars5 Stars
(No Ratings Yet)
Loading...

iftar-kutaಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಇಫ್ತಾರ್ ಕೂಟ ನಡೆಯಿತು.

ಎಷ್ಟೇ ಶ್ರೀಮಂತ ಇರಲಿ, ಬಡವನಿರಲಿ ಪ್ರತಿಯೊಬ್ಬರಿಗೂ ಹಸಿವಿನ ಮಹತ್ವ ಅರಿಯಲು, ದೀನರ ನೋವುಗಳು ತಿಳಿಯಲು ಪವಿತ್ರ ರಂಝಾನ್ ತಿಂಗಳಲ್ಲಿ ಉಪವಾಸ ಆಚರಿಸುತ್ತೇವೆ. ಇಸ್ಲಾಂನ ಪ್ರತಿಯೊಂದು ಆಚರಣೆಗಳು ಸಾಮಾಜಿಕ, ಮಾನವೀಯ ಹಿನ್ನೆಲೆಯಲ್ಲಿರುವಂತದ್ದು. ವಿಶ್ವದಲ್ಲಿ ಇಸ್ಲಾಂ ಧರ್ಮದ ಬಗ್ಗೆ ತಪ್ಪು ಗ್ರಹಿಕೆಗಳಿವೆ.

ಇಸ್ಲಾಂ ಆಗಲಿ ಯಾವುದೇ ಧರ್ಮವಾಗಲಿ ಕೋಮುವಾದಕ್ಕೆ ಮಣೆ ನೀಡುವುದಿಲ್ಲ. ಎಲ್ಲ ಧರ್ಮಗಳಲ್ಲಿರುವಂತೆ ಇಸ್ಲಾಂ ಕೂಡ ಮಾನವೀಯ ಆದರ್ಶಗಳನ್ನು ಪ್ರತಿಪಾಧಿಸುತ್ತದೆ. ಕೋಮುವಾದ, ಉಗ್ರವಾದಗಳನ್ನು ಎಂದಿಗೂ ಇಸ್ಲಾಂ ಧರ್ಮ ಸಮರ್ಥಿಸುವುದಿಲ್ಲ. ಇಸ್ಲಾಂ ಧರ್ಮದ ಆದರ್ಶಗಳು ಮುಸ್ಲಿಂ ಬಂಧುಗಳಿಗೆ ಮಾತ್ರ ಸೀಮಿತವಲ್ಲ. ಧರ್ಮಗಳ ನಡುವೆ ಸಮನ್ವಯತೆ ಸಾಧಿಸುವ ಶಕ್ತಿ ಇಸ್ಲಾಂ ಧರ್ಮಕ್ಕಿದೆ ಎಂದು ಪುತ್ತೂರಿನ ಪ್ರಾಧ್ಯಾಪಕ ಅನಿಸ್ ಗೌಸರ್ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಆಳ್ವಾಸ್ ಇಫ್ತಾರ್ ಕೂಟದಲ್ಲಿ ಬುಧವಾರ ಸಾಯಂಕಾಲ ಅವರು ಪ್ರಧಾನ ಭಾಷಣ ಮಾಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಶಾಸಕ ಉಮಾನಾಥ ಕೋಟ್ಯಾನ್, ಉದ್ಯಮಿ ಶ್ರೀಪತಿ ಭಟ್, ಮಿಜಾರು ಶ್ರೀನಿವಾಸ ಆಳ್ವ, ಪ್ರತಾಪ್ ಕುಮಾರ್, ಮುಸ್ತಾಫ್, ಮಹಮ್ಮದ್ ಹನೀಫ್, ಕೆ.ಎಸ್ ಶೇಖ್ ಕರಿಂಜೆ, ನಾರಾಯಣ ಪಿ.ಎಂ, ಹಸ್ದುಲ್ಲಾ ಇಸ್ಲಾಯಿಲ್, ಅಬೂಬಕ್ಕರ್, ಸಿ.ಎಚ್ ಗಫೂರ್, ದಿನೇಶ್ ಆನಡ್ಕ, ಕರ್ನಿರೆ ಶರೀಫ್ ಸಹಿತ ಮಸೀದಿಗಳ ಅಧ್ಯಕ್ಷರು, ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.

ಅಬು ಅಲಾ ಪುತ್ತಿಗೆ ಕಾರ್ಯಕ್ರಮ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English