ಹಾಸನ ಜಿಲ್ಲೆಯನ್ನು ನಂ.1 ಮಾಡಿದವರಿಗೆ ಅವಾರ್ಡ್‌ : ಸಚಿವ ಹೆಚ್.ಡಿ.ರೇವಣ್ಣ

6:23 PM, Thursday, June 14th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

h-d-revannaಹಾಸನ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಯಿತು.

ಜಿಲ್ಲೆಯೂ ಎಲ್ಲಾ ಕ್ಷೇತ್ರದಲ್ಲಿಯೂ ನಂ.1 ಮಾಡಬೇಕು. ಉತ್ತಮ ಕಾರ್ಯ ಮಾಡುವ ಪಿಡಿಓ ಮತ್ತು ಕಾರ್ಯದರ್ಶಿಗಳಿಗೆ ಅವಾರ್ಡ್ ನೀಡುವುದಾಗಿ ಸಚಿವರು ಘೋಷಿದರು. 25 ರಿಂದ 50 ಸಾವಿರ ರೂ. ವರೆಗೂ ಬಹುಮಾನದೊಂದಿಗೆ ಪ್ರಮಾಣಪತ್ರ ನೀಡುವುದಾಗಿ ತಿಳಿಸಿದರು.

600ಕ್ಕೂ ಹೆಚ್ಚು ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರಿಂದ ಹೇಮಾವತಿ ಸಂಭಾಗಣ ತುಂಬಿ ತುಳುಕುತ್ತಿತ್ತು. ಸಂಭಾಗಣದಲ್ಲಿ ಕೂರಲು ಸ್ಥಳವಿಲ್ಲದೇ ಹೊರಾಂಗಣದಲ್ಲಿ, ಮೀಟಿಂಗ್ ಹಾಲ್ ಸೇರಿದಂತೆ ಮೆಟ್ಟಿಲುಗಳ ಮೇಲೆ ಅಧಿಕಾರಿಗಳು ನಿಂತಿರುವ ದೃಶ್ಯ ಕಂಡು ಬಂತು. ಸಭೆಯಲ್ಲಿ ಪಿಡಿಒಗಳಿಗೆ ಸಚಿವ ರೇವಣ್ಣ ಕ್ಲಾಸ್ ತೆಗೆದುಕೊಂಡರು. ಕಲಬುರಗಿ ಪಂಚಾಯಿತಿ ರೀತಿಯಲ್ಲಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಿ ಎಂದು ತಾಕೀತು ಮಾಡಿದರು.

ಫಲಾನುಭವಿಗಳ ಪಟ್ಟಿ ಮಾಡಿ ಅಧ್ಯಯನಕ್ಕಾಗಿ ಬಸ್‌ನಲ್ಲಿ ಕಳುಹಿಸಿಕೊಡಿ. ಕೃಷಿ ಮತ್ತು ತೋಟಗಾರಿಕೆಯಲ್ಲಿ ಬೇಲೂರು ಮತ್ತು ಚನ್ನರಾಯಪಟ್ಟಣ ತಾಲೂಕು ಮುಂಚೂಣಿಯಲ್ಲಿದೆ. ಉಳಿದ ತಾಲೂಕುಗಳು ಕಡಿಮೆ ಪ್ರಮಾಣದ ಸಾಧನೆ ಮಾಡಿದ್ದಾರೆ. ಪಿಡಿಓಗಳು ಸರಿಯಾಗಿ ಕೆಲ್ಸ ಮಾಡದಿದ್ದರೇ ಡಿಸ್‌‌ಮಿಸ್ ಮಾಡುತ್ತೇನೆ ಎಂದು ಎಚ್ಚರಿಸಿದರು.

ನಾನು ಡಿಗ್ರಿ ಮಾಡಿದ್ದೇನೆ. ಪಿಡಿಓಗಳು ಡಿಗ್ರಿ ಮಾಡಿದ್ದಾರೆ. ಅವರಿಗೂ ನನಗೂ ಯಾವುದೇ ವ್ಯತ್ಯಾಸವಿಲ್ಲ. ಆದರೂ ಕೆಲಸ ಏಕೆ ಮಾಡಲ್ಲ ಎಂದು ಸಿಇಒ ಗರಂ ಆದರು. ಸಿಇಒ ಮಾತಿಗೆ ಸಾಥ್ ನೀಡಿದ ರೇವಣ್ಣ. ಕೆಲಸ ಮಾಡದವರನ್ನ ಓಡಿಸಿ ಸಾರ್ ನಿಮ್ಮ ಜೊತೆ ನಾನಿರುವೆ ಎಂದರು. ಜಿಲ್ಲೆಯಲ್ಲಿ ಅಕ್ರಮವಾಗಿ ಲೇಔಟ್ ನಿರ್ಮಾಣವಾಗುತ್ತಿದೆ. ಕೆರೆಯ ಹೂಳೆತ್ತುವ ಕಾಮಗಾರಿಯ ನೆಪದಲ್ಲಿ ಅಲ್ಲಿನ ಮಣ್ಣನ್ನ ತೆಗೆದು ಲೇಔಟ್‌ಗೆ ಸಾಗಿಸುತ್ತಿದ್ದಾರೆ. ಪಿಡಿಒಗಳು ಮತ್ತು ಕಾರ್ಯದರ್ಶಿಗಳು ಜಂಟಿಯಾಗಿ ಸರ್ವೆ ಮಾಡಿ. ಮನೆಯಿಲ್ಲದವರನ್ನ ಗುರುತಿಸುವ ಕಾರ್ಯ ಮಾಡಿ. ಕಳೆದ ಎರಡು ಮೂರು ವರ್ಷದಿಂದ ಹಲವು ಕಾಮಗಾರಿಗಳು ನೆನಗುದಿಗೆ ಬಿದ್ದಿವೆ. ಕಾಮಗಾರಿ ಮಾಡಲು ಸಂಬಂಧಿಸಿದವರಿಗೆ ಸೂಕ್ತ ಆದೇಶ ನೀಡಲು ಡಿಸಿ ಹಾಗೂ ಸಿಇಓಗೆ ಸಚಿವರು ಸೂಚಿಸಿದರು.

ಇನ್ನು ಸಭೆಯಲ್ಲಿ ಬಹಿರಂಗವಾಗೇ ದೂರು ನೀಡಿದ ಅರಕಲಗೂಡು ತಾಲೂಕಿನ ಗಂಗೂರು ಪಿಡಿಓ ಶ್ರೀನಿವಾಸ್, ಕಾನೂನು ವ್ಯಾಪ್ತಿ ಮೀರಿ ಕೆಲಸ ಮಾಡಲು ಕೆಲವರಿಂದ ಒತ್ತಯ ಮಾಡ್ತಾರೆ ಎಂದರು. ಸೂಕ್ತ ರಕ್ಷಣೆ ನೀಡುವಂತೆ ಪಿಡಿಓ ಶ್ರೀನಿವಾಸ್ ಮನವಿ ಮಾಡಿದರು. ಅಧ್ಯಕ್ಷರ ಗಮನಕ್ಕೆ ತಂದು ಕಾನೂನು ರೀತಿಯಲ್ಲಿ ಕೆಲಸ ಮಾಡಿ ಎಂದು ಸಚಿವರು ತಿಳಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English