ಈದ್ ಗೆ 3.65 ಕೋಟಿ ಬೆಲೆಯ ಕಾರು ಖರೀದಿಸಿದ ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್

2:54 PM, Friday, June 15th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

 

B.M Farookಮಂಗಳೂರು  : ಜೆಡಿಎಸ್ ಮುಖಂಡ, ವಿಧಾನಪರಿಷತ್ ಸದಸ್ಯರು, ಫಿಝಾ ಗ್ರೂಪ್ ಎಂ.ಡಿ.ಯೂ ಆಗಿರುವ ಬಿ.ಎಂ.ಫಾರೂಕ್ ಲ್ಯಾಂಡ್ ರೋವರ್ ಬ್ರಾಂಡ್’ನ ರೇಂಜ್ ರೋವರ್ ಆಟೋಬಯೋಗ್ರಫಿ ಐಷಾರಾಮಿ ಕಾರನ್ನು ಈ ಬಾರಿಯ ಈದ್  ಹಬ್ಬಕ್ಕಾಗಿ ಖರೀದಿಸಿದ್ದಾರೆ.

ಮಂಗಳೂರು ಫಿಝಾ ಮಾಲ್ ನ ನೆಲ ಅಂತಸ್ತಿನಲ್ಲಿ ಗುರುವಾರ ರಾತ್ರಿ ತಂದಿಡಲಾಗಿದ್ದ ಕಾರನ್ನು . ಈದ್  ಕೇಕ್ ಕತ್ತರಿಸಿ ಕುಟುಂಬ ಸದಸ್ಯರ ಸಮ್ಮುಖ ಬಿ.ಎಂ.ಫಾರೂಕ್ ಚಾಲನೆ ನೀಡಿದರು.

ಈ ಕಾರನ್ನು ಕಂಪೆನಿಯಲ್ಲಿ ಹೇಳಿ ವಿಶೇಷವಾಗಿ ತಯಾರಿಸಲಾಗಿದೆ. ಕರ್ನಾಟಕಕ್ಕೆ ಈ ಕಾರು ಪ್ರಥಮ ಬಾರಿ ಬರುತ್ತಿದೆ. ಈ ಐಷಾರಾಮಿ ಕಾರಿನ ಮೌಲ್ಯ ಬರೋಬ್ಬರಿ 3 ಕೋಟಿ 65 ಲಕ್ಷ ರೂಪಾಯಿಗಳು.

ಕಾರಿನ ಅಂದ ನೋಡಲು ಫೋರಂ ಫಿಝಾ ಮಾಲ್ ನಲ್ಲಿ ಜನ ಮುಗಿ ಬಿದ್ದಿದ್ದರು.

B.M Farook

B.M Farook

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English