ಮಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವರು, ದೈವಗಳನ್ನು ಅತ್ಯಂತ ಕೀಳುಭಾಷೆ ಬಳಸಿ ನಿಂದಿಸಿ , ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಲಾಗಿದೆ.
ಬಷೀರ್ ಅಡ್ಯಾರ್ ಬಷೀರ್ ಹೆಸರಿನ ಖಾತೆಯಲ್ಲಿ ಪೋಸ್ಟ್ ಮಾಡಿದ ಫೋಟೋ ಗಳು ವೈರಲ್ ಆಗಿದ್ದು ಅದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹಿಂದೂ ದೇವರುಗಳನ್ನು ಮಾತ್ರವಲ್ಲದೇ ಛತ್ರಪತಿ ಶಿವಾಜಿ ಮಹಾರಾಜ್ , ಪ್ರಧಾನಿ ನರೇಂದ್ರ ಮೋದಿ ಫೊಟೊ ಗಳನ್ನು ವಿರೂಪಗೊಳಿಸಿ ಅವಹೇಳನಕಾರಿಯಾದ ರೀತಿಯಲ್ಲಿ ಪೋಸ್ಟ ಮಾಡಲಾಗಿದೆ
ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಷೀರ್ ಹೆಸರಿನ ನ ಈ ಪೋಸ್ಟ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹಿಂದೂ ಯುವಕನೊಬ್ಬನ ಪ್ರೊಫೈಲ್ ಫೋಟೊ ಹಾಕಿರುವ ಬಷೀರ್ ಅಡ್ಯಾರ್ ಎಂಬಾತ ಹಿಂದೂಗಳ ಆರಾಧ್ಯ ದೇವಿ ಲಕ್ಷ್ಮೀ ಜತೆ ಪ್ರಧಾನಿ ಮೋದಿ ಫೋಟೊ ಆಶ್ಲೀಲ ರೀತಿಯಲ್ಲಿ ಎಡಿಟ್ ಮಾಡಿದ್ದಲ್ಲದೇ, ಮಾಡೆಲ್ ಓರ್ವಳ ಚಿತ್ರವನ್ನು ಕೂಡ ದೇವಿ ಚಿತ್ರದ ಜತೆ ಎಡಿಟ್ ಮಾಡಿ ವಿಕೃತಿ ಮೆರೆದಿದ್ದಾನೆ.
ಇನ್ನು ಶಿವಾಜಿ ಮಾಹಾರಾಜ್ ಅವರ ಚಿತ್ರವನ್ನು ಗೋರಿಲ್ಲಾಕ್ಕೆ ಅಂಟಿಸಿರುವ ಈತನಿಗೆ ಕೆಲ ಸಮಾನ ಮನಸ್ಕರೂ ಪ್ರೋತ್ಸಾಹ ನೀಡಿ ವಿರೂಪಗೊಳಿಸಲಾದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಖಾತೆಗಳ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸಲು ಮುಂದಾಗಿರುವ ಇಂತಹ ವ್ಯಕ್ತಿಗಳ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಹಿಂದೂ ಸಂಘಟನೆಯ ಮುಖಂಡರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಸೈಬರ್ ಕ್ರೈಂ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.
ಬಷೀರ್ ಅಡ್ಯಾರ್ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಷೀರ್ ಅಡ್ಯಾರ್ ನ ಫೇಸ್‌ಬುಕ್ ಖಾತೆಯ ಕುರಿತು ತನಿಖೆ ಆರಂಭಿಸಿದ್ದು, ಬಷೀರ್ ಅಡ್ಯಾರ್ ನನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
Click this button or press Ctrl+G to toggle between Kannada and English