ನಾವು ಸಂಗೀತಕ್ಕೆ ವಿರೋಧಿಗಳಲ್ಲ..ಅದರ ಹೆಸರಿನಲ್ಲಿ ಡ್ಯಾನ್ಸ್ ಮತ್ತಿತ್ಯಾದಿಗಳಿಗೆ ವಿರೋಧವಿದೆ: ಆಶಾ ಜಗದೀಶ್

12:37 PM, Tuesday, June 19th, 2018
Share
1 Star2 Stars3 Stars4 Stars5 Stars
(No Ratings Yet)
Loading...

bajarangdalಮಂಗಳೂರು: ನಗರದ ಹಲವು ಕಡೆ ಲೈವ್‌ಬ್ಯಾಂಡ್, ಲೇಡಿಸ್ ಬಾರ್, ಪಬ್, ಮಸಾಜ್ ಸೆಂಟರ್‌ಗಳಿಗೆ ಕಡಿವಾಣ ಹಾಕದಿದ್ದರೆ ಈ ಹಿಂದೆ ಪಬ್ ಮೇಲೆ ನಡೆದ ದಾಳಿ ಪ್ರಕ್ರಿಯೆಗಳು ಮರುಕಳಿಸಬಹುದು ಎಂದು ವಿಎಚ್‌ಪಿ ಮಹಿಳಾ ಪ್ರಮುಖ್ ಆಶಾ ಜಗದೀಶ್ ತಿಳಿಸಿದ್ದಾರೆ.

ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾವು ಸಂಗೀತಕ್ಕೆ ವಿರೋಧಿಗಳಲ್ಲ. ಆದರೆ, ಅದರ ಹೆಸರಿನಲ್ಲಿ ಡ್ಯಾನ್ಸ್ ಮತ್ತಿತ್ಯಾದಿಗಳಿಗೆ ವಿರೋಧವಿದೆ. ನಗರದ ಹಲವು ಕಡೆಗಳಲ್ಲಿ ಲೈವ್‌ಬ್ಯಾಂಡ್, ಲೇಡಿಸ್ ಬಾರ್ ಮತ್ತಿತ್ಯಾದಿ ತಲೆ ಎತ್ತುತ್ತಿವೆ. ಅದಕ್ಕೆ ಕಡಿವಾಣ ಹಾಕಬೇಕು ಎಂದರು.

ವಿಎಚ್‌ಪಿ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಮಾತನಾಡಿ ನಗರದ ಲಾಲ್‌ಬಾಗ್, ಹಂಪನಕಟ್ಟೆ, ಪಂಪ್‌ವೆಲ್ ಮತ್ತಿತರ ಕಡೆಗಳಲ್ಲಿ ಲೇಡಿಸ್ ಬಾರ್, ಲೈವ್‌ಬ್ಯಾಂಡ್, ಪಬ್, ಮಸಾಜ್ ಸೆಂಟರ್‌ಗೆ ಅನುಮತಿ ನೀಡಲಾಗಿದೆ. ಇದರಿಂದ ಅದೆಷ್ಟೋ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಇದೆ. ಇಲ್ಲಿ ವೇಶ್ಯಾವಾಟಿಕೆ ನಡೆಯುವ ಸಾಧ್ಯತೆಯೂ ಇದೆ. ಯುವಕರೂ ಹಾದಿ ತಪ್ಪುವ ಅಪಾಯವೂ ಇದೆ. ಹಾಗಾಗಿ ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ಇದರ ಅನುಮತಿಯನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ದೇವತೆಗಳು, ದೈವಗಳು, ಮಠಮಂದಿರ, ದೇವಸ್ಥಾನಗಳ ಬಗ್ಗೆ ಅವಹೇಳನಕಾರಿ ಸಂದೇಶಗಳನ್ನು ಮತ್ತು ಚಿತ್ರಗಳನ್ನು ಹರಿದು ಬಿಡುತ್ತಿರುವುದು ಖಂಡನೀಯ. ಸಂಬಂಧಪಟ್ಟ ಇಲಾಖೆಯು ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬಜರಂಗ ದಳ ಜಿಲ್ಲಾ ಸಂಚಾಲಕ ಪ್ರವೀಣ್ ಕುತ್ತಾರ್, ವಿಭಾಗ ಸಂಚಾಲಕ ಭುಜಂಗ ಕುಲಾಲ್, ಜಿಲ್ಲಾ ಸಹ ಸಂಚಾಲಕ ಪ್ರದೀಪ್ ಪಂಪ್‌ವೆಲ್, ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English