ಬಾಲಕಿಯನ್ನು ಮನೆಗೆಲಸದಿಂದ ಬಿಡಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿಗಳು

1:22 PM, Friday, November 18th, 2011
Share
1 Star2 Stars3 Stars4 Stars5 Stars
(9 rating, 6 votes)
Loading...

child Labour

ಮಂಗಳೂರು: ಕಾರ್ಮಿಕ ಇಲಾಖೆಯ ಅಧಿಕಾರಿಗಳು ಗುರುವಾರ ನಗರದ ಪಾಂಡೇಶ್ವರದಲ್ಲಿ ಮನೆ ಕೆಲಸ ನಿರ್ವಹಿಸುತ್ತಿದ್ದಳೆನ್ನಲಾದ ಚಿಕ್ಕಮಗಳೂರು ಮೂಲದ ಬಾಲಕಿಯೋರ್ವಳನ್ನು ಪತ್ತೆ ಹಚ್ಚಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ.

ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪಾಂಡೇಶ್ವರ ಪೊಲೀಸರ ಸಹಕಾರದಲ್ಲಿ ಓಲ್ಡ್‌ಕೆಂಟ್‌ ರಸ್ತೆಯಲ್ಲಿನ ಮನ್ಸೂರ್‌ ಹುಸೈನ್‌ ಅವರ ಮನೆಗೆ ದಾಳಿ ಮಾಡಿ ಬಾಲಕಿಯನ್ನು ವಶಕ್ಕೆ ತೆಗೆದುಕೊಂಡರು. ರಕ್ಷಿಸಲ್ಪಟ್ಟ ಬಾಲಕಿಯನ್ನು ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಬೆಗೂರು ಗ್ರಾಮದ ಮಿನಾಝ್ 12 ವ ಎಂದು ಗುರುತಿಸಲಾಗಿದೆ.

child Labour

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಗಂಗಾಧರ್‌ ಅವರು ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದು, ಸಮಿತಿಯವರು ಪ್ರಜ್ಞಾ ಸಲಹಾ ಕೇಂದ್ರಕ್ಕೆ ಒಪ್ಪಿಸಿದ್ದಾರೆ.

ಬಾಲಕಿಯ ವಯಸ್ಸು 10 ರಿಂದ 12 ಇರ ಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹೇಳಿದ್ದು. ಶುಕ್ರವಾರ ಆಕೆಯ ವಯಸ್ಸಿನ ದೃಢೀಕರಣಕ್ಕಾಗಿ ವೈದ್ಯಕೀಯ ಪರೀಕ್ಷೆಗೆ ಒಳ ಪಡಿಸುವ ಸಾಧ್ಯತೆ ಇದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English