ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಳಸುತ್ತಿದ್ದ ಆ ಕಾರು ನನಗೆ ಬೇಕು: ಸಚಿವ ಜಮೀರ್ ಅಹ್ಮದ್

1:42 PM, Tuesday, June 19th, 2018
Share
1 Star2 Stars3 Stars4 Stars5 Stars
(No Ratings Yet)
Loading...

jameer-ahmedಬೆಂಗಳೂರು: ಸಿದ್ದರಾಮಯ್ಯ ಅಂದ್ರೆ ನನಗಿಷ್ಟ, ಅವರ ಕಾರನ್ನೇ ಕೊಡಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹ್ಮದ್ ಪಟ್ಟು ಹಿಡಿದಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಳಸುತ್ತಿದ್ದ ಆ ಕಾರು ನನಗೆ ಬೇಕು. ಫಾರ್ಚೂನರ್ ಕಾರು ನನಗೆ ಕೊಡಿ ಎಂದು ಜಮೀರ್ ಅಹ್ಮದ್ ಡಿಪಿಎಆರ್ ಗೆ ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಎಂ- 01, ಜಿ 5734 ನಂಬರಿನ ಫಾರ್ಚೂನರ್ ಕಾರು ಬಳಸುತ್ತಿದ್ದರು. ಈಗ ಅದೇ ಕಾರು ಬೇಕು ಎಂದು ಜಮೀರ್ ಪಟ್ಟು ಹಿಡಿದಿದ್ದಾರೆ.

ಕಾರನ್ನು ಜಮೀರ್ ಗೆ ಕೊಡೋದು ಬೇಡ. ಆ ಕಾರನ್ನು ಯಾರಾದರೂ ಹಿರಿಯ ಮಂತ್ರಿಗಳಿಗೆ ಕೊಡೋಣ ಎಂದು ಹೆಚ್‍ಡಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕುಮಾರಸ್ವಾಮಿ ತನ್ನ ಬೇಡಿಕೆಯನ್ನು ತಿರಸ್ಕರಿಸಿದ್ದಕ್ಕೆ ಜಮೀರ್ ಅಹ್ಮದ್ ಬೇಸರಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English