ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನೆ

12:05 PM, Wednesday, June 20th, 2018
Share
1 Star2 Stars3 Stars4 Stars5 Stars
(No Ratings Yet)
Loading...

st-alociousಮಂಗಳೂರು: ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಮಂಗಳೂರು ಇದರ 2018-19ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯು 19ನೇ ಜೂನ್ 2018ರಂದು ಮಧ್ಯಾಹ್ನ 3 ಘಂಟೆಗೆ ಕಾಲೇಜಿನ LCRI ಸಭಾಂಗಣದಲ್ಲಿ ನಡೆಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಬಿ.ಎಸ್. ನಾಗೇಂದ್ರ ಪ್ರಕಾಶ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ರೆ. ಫಾ. ಡಯನೀಶಿಯಸ್ ವಾಜ್ ರವರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ.ರವರು ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.

st-alocious-2ಪ್ರೊ. ಬಿ.ಎಸ್. ನಾಗೇಂದ್ರ ಪ್ರಕಾಶ್, ತಮ್ಮ ಉದ್ಘಾಟನಾ ಭಾಷಣದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ, ಅವರು ಕ್ಯಾಂಪಸ್ನಲ್ಲಿ ಹಸಿರಾಗಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದರು. ಅದಕ್ಕಾಗಿ ಅವರ ಜೊತೆ ಕೈಜೋಡಿಸಬೇಕೆಂದು ಕೇಳಿದರು. ಬಡ ವಿದ್ಯಾರ್ಥಿಗಳಿಗಾಗಿ ಅಭ್ಯುದಯಕ್ಕಾಗಿ ವಿದ್ಯಾರ್ಥಿಗಳು ಆಯೋಜಿಸಿದ “ಒಂದು ರೂಪಾಯಿ ನಾಣ್ಯದ ಕ್ರಾಂತಿ” ಎಂಬ ಯೋಜನೆಯನ್ನು ಕೊಂಡಾಡಿದರು. ಅಲ್ಲದೆ ಸಂತ ಅಲೋಶಿಯಸ್ ಕ್ಯಾಂಪಸನ್ನು ಪ್ಲಾಸ್ಟಿಕ್ ಮುಕ್ತವಾಗಿಸಬೇಕೆಂದು ವಿದ್ಯಾರ್ಥಿಗಳಲ್ಲಿ ವಿನಂತಿಸಿದರು.

st-alocious-3ರೆ. ಫಾ. ಡಯನೀಶಿಯಸ್ ವಾಜ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ, ನಾಯಕತ್ವವು ಆಯ್ಕೆಯನ್ನು ಒಳಗೊಂಡಿದೆ ಮತ್ತು ಆಯ್ಕೆಗಳು ಯೋಜನೆಗಳನ್ನು ಒಳಗೊಂಡಿರುತ್ತದೆ ಎಂದರು. ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಗುಣಗಳು ಇರಬೇಕು ಮತ್ತು ಅದು ನಾಯಕತ್ವಕ್ಕೆ ಬಹಳ ಅಗತ್ಯವಾದುದು ಎಂದೂ ಅವರು ಹೇಳಿದರು. ಅಲ್ಲದೆ ವಿದ್ಯಾರ್ಥಿಗಳು ಬದಲಾವಣೆಯ ಮಧ್ಯವರ್ತಿಗಳಾಗಿರಬೇಕೆಂದು ತಿಳಿಸಿದರು.

st-alocious-4ರೆ. ಫಾ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ.ರವರು ವಿದ್ಯಾರ್ಥಿಗಳ “ಒಂದು ರೂಪಾಯಿ ನಾಣ್ಯದ ಕ್ರಾಂತಿ” ಎಂಬ ಹೊಸ ಯೋಜನೆಯನ್ನು ಉತ್ತೇಜಿಸುತ್ತಾ ಶ್ಲಾಘಿಸಿದರು. ಅಲ್ಲದೆ ಅವರು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ವಿಶೇಷ ಜವಾಬ್ದಾರಿಯೊಂದಿಗೆ ರೂಪಿಸಿಕೊಳ್ಳಬೇಕೆಂದು ಹೇಳಿ ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದ ಸದಸ್ಯರನ್ನು ಅಭಿನಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English