ರಾಂಚಿ: ಟೀಂ ಇಂಡಿಯಾ ಕ್ರಿಕೆಟ್‌ನ ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಪತ್ನಿ ಅವರಿಗೆ ಜೀವ ಬೆದರಿಕೆ ಇರುವ ಕಾರಣ ಗನ್ ಲೈಸನ್ಸ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
2010ರಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಗನ್ ಲೈಸನ್ಸ್ ಪಡೆದುಕೊಂಡಿದ್ದರು. ಈಗ ಸಾಕ್ಷಿ ಸಿಂಗ್ ಧೋನಿ ಪಿಸ್ತೂಲ್ ಅಥವಾ 3.2 ರಿವಾಲ್ವರ್ ಪಡೆದುಕೊಳ್ಳಲು ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಬಹುತೇಕವಾಗಿ ಅವರು ಮನೆಯಲ್ಲಿ ಏಕಾಂಗಿಯಾಗಿರುವ ಕಾರಣ ಜತೆಗೆ ಖಾಸಗಿ ಕೆಲಸದ ನಿಮಿತ್ತ ಹೊರಗಡೆ ಓಡಾಡುವುದರಿಂದ ಜೀವ ರಕ್ಷಣೆಗಾಗಿ ಗನ್ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಹೇಂದ್ರ ಸಿಂಗ್ ಧೋನಿ 2008ರಲ್ಲಿ ತಮಗೆ 9ಎಂಎಂ ಗನ್ ಪಡೆದುಕೊಳ್ಳಲು ಅವಕಾಶ ನೀಡುವಂತೆ ಕೋರಿ ರಾಂಚಿ ಜಿಲ್ಲಾ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇದರ ಪರಿಶೀಲನೆ ನಡೆಸಿದ್ದ ಕೇಂದ್ರ ಗೃಹ ಸಚಿವಾಲಯ ಅವರಿಗೆ 2010ರಲ್ಲಿ ಲೈಸನ್ಸ್ ನೀಡಿತ್ತು.
Click this button or press Ctrl+G to toggle between Kannada and English