ಚಿಕ್ಕಮಗಳೂರು: ದೇಶದ ಎಲ್ಲ ರಾಜ್ಯಗಳಲ್ಲಿರುವ ಹಲವಾರು ಸರ್ಕಾರಿ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಅವರವರ ಕೆಲಸ ನೋಡಿಕೊಂಡು ತೆರಿಗೆ ದಾಳಿ ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಲವಾರು ದಾಳಿ ನಡೆಸುತ್ತಾರೆ. ಕರ್ನಾಟಕದಲ್ಲಿ ಮಾತ್ರ ಅಲ್ಲವೆಂದು ಸಚಿವ ಡಿ ಕೆ ಶಿವಕುಮಾರ್ ವಿರುದ್ಧ ಪ್ರಕರಣ ಕುರಿತು ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದರು.
ನಗರದಲ್ಲಿ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಮಾಡಿದ ಅವರು, ದೇಶದಲ್ಲಿ 70 ವರ್ಷಗಳಿಂದ ತನಿಖಾ ವ್ಯವಸ್ಥೆ ನಡೆದುಕೊಂಡು ಬಂದಿದೆ. ಆದ್ರೆ ಕಾಂಗ್ರೆಸ್ ಮುಖಂಡರು ಸಚಿವ ಡಿಕೆಶಿ ಅವರ ಮೇಲಿನ ಐಟಿ ದಾಳಿಯನ್ನು ರಾಜಕೀಕರಣ ಮಾಡುತ್ತಿದ್ದಾರೆ. ಹಿಂದೆ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಅವರು ದಾಳಿ ನಡೆಸಿದ್ದು ರಾಜಕೀಯ ಆಗಿತ್ತಾ ಎಂದು ಶೋಭಾ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್‌ನವರು ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಅವರು ಅಪಮಾನ ಮಾಡುತ್ತಿದ್ದಾರೆ. ಅವರು 50 ವರ್ಷ ಅಧಿಕಾರ ನಡೆಸಿದ್ದಾರೆ. ಅವರು ಮಾಡಿರುವಂತಹ ಅನ್ಯಾಯ ಪತ್ತೆ ಹಚ್ಚಲು ಹೊರಟರೇ ವಿರೋಧಿಸುತ್ತಿದ್ದಾರೆ. ತಪ್ಪು ಮಾಡಿದವನಿಗೆ ಶಿಕ್ಷೆ ಆಗುತ್ತೆ. ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು. ಯಾರು ಸರಿಯಾಗಿ ತೆರಿಗೆ ಕಟ್ಟಿದ್ದಾರೆ. ಅವರಿಗೆ ಭಯ ಇರೋಲ್ಲ. ಯಾರು ಸರಿಯಾಗಿ ತೆರಿಗೆ ಕಟ್ಟಿರೋದಿಲ್ಲ ಅವರು ಮಾತ್ರ ಭಯ ಪಡ್ತಾರೆ. ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದ್ದು, ಅವರಿಗೂ ಸಾಕಷ್ಟು ಅವಕಾಶಗಳಿವೆ. ಅವರು ಕೂಡ ತನಿಖೆ ಮಾಡಬಹುದು ಎಂದು ಸಂಸದೆ ಶೋಭ ಕರಂದ್ಲಾಜೆ ಹೇಳಿದರು.
Click this button or press Ctrl+G to toggle between Kannada and English