ಮಹಾರಾಷ್ಟ್ರ: ಬಡವರ ಬಂಧು ನೊಂದವರ ಆಶಾಕಿರಣವಾಗಿದ್ದ ಹಾಗೂ ಬೇಡಿದ್ದನ್ನು ನೀಡುವ ಕರುಣಾಮಯಿ ದೇವರು ಎಂದೇ ಪ್ರಸಿದ್ಧವಾಗಿರುವ ಸಾಯಿಬಾಬಾ ಇದೀಗ ಸಾಕ್ಷಾತ್ ದೇವರಾಗಿದ್ದಾರೆ.
ಹೌದು ಇಷ್ಟೆಲ್ಲ ಪೀಠಿಕೆ ಹಾಕುತ್ತಿರುವುದು ಶಿರಡಿಸಾಯಿ ಬಾಬಾ ಟ್ರಸ್ಸ್ ಬಗ್ಗೆ… ಶಿರಡಿಸಾಯಿ ಬಾಬಾ ಟ್ರಸ್ಟ್ ಗ್ರಾಮೀಣ ಬಡ ರೋಗಿಗಳ ಪಾಲಿಗೆ ಇದೀಗ ಆಶಾಕಿರಣವಾಗಿದೆ.
ಗ್ರಾಮೀಣ ರೋಗಿಗಳನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರ ಸರ್ಕಾರ ನಡೆಸುತ್ತಿರುವ ಮೆಡಿಕಲ್ ಕಾಲೇಜುಗಳನ್ನ ಆಧುನೀಕರಣ ಹಾಗೂ ಮೇಲ್ದರ್ಜೆಗೇರಿಸಲು ಆರ್ಥಿಕ ಸಹಾಯ ನೀಡಿದೆ. ಇದಕ್ಕಾಗಿ ಟ್ರಸ್ಟ್ ಒಂದಲ್ಲ ಎರಡಲ್ಲ ಬರೋಬ್ಬರಿ 71 ಕೋಟಿ ರೂಪಾಯಿ ದಾನ ಮಾಡಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಟ್ರಸ್ಟ್‌ನ ಅಧ್ಯಕ್ಷ ಸುರೇಶ್ ಹಾವ್ರೆ , ಯಾವತ್‌ಮಲ್, ಚಂದಾಪುರ, ಔರಂಗಾಬಾದ್ ಮತ್ತು ನಾಗ್ಪುರದ ವೈದ್ಯಕೀಯ ಮಹಾವಿದ್ಯಾಲಯಗಳ ಏಳಿಗೆಗಾಗಿ ಬರೋಬ್ಬರಿ 71 ಕೋಟಿ ರೂ. ದಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ. ವೈದ್ಯಕೀಯ ಕಾಲೇಜುಗಳ ಅಭಿವೃದ್ಧಿ ಹಾಗೂ ಬಡ ರೋಗಿ ಕಲ್ಯಾಣಕ್ಕಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಮೀಟಿಂಗ್ ಮಾಡಿದ್ದು, ಉತ್ತಮ ವೈದ್ಯಕೀಯ ಸೇವೆ ಒದಗಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.
ಡೋಗ್ನಸ್ಟಿಕ್ ಸೆಂಟರ್, ಎಂಐಆರ್ ಸ್ಕ್ಯಾನ್, ಸಿಟಿ ಸ್ಕ್ಯಾನ್‌ಗೋಸ್ಕರ್ ಈ ಹಣ ಬಳಕೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದ್ದು, ಪ್ರಮುಖವಾಗಿ ಯಾವತ್‌ಮಲ್, ಚಂದಾಪುರ, ಔರಂಗಾಬಾದ್ ಮತ್ತು ನಾಗ್ಪುರ್‌ನ ವೈದ್ಯಕೀಯ ಕಾಲೇಜುಗಳಲ್ಲಿ ಈ ಹಣ ಬಳಕೆ ಆಗಲಿದೆ. ಯಾವತ್‌ಮಲ್ ವೈದ್ಯಕೀಯ ಕಾಲೇಜ್‌ಗೆ 35.3 ಕೋಟಿ, ಇಂದಿರಾ ಗಾಂಧಿ ಮೆಡಿಕಲ್ ಕಾಲೇಜ್‌ಗೆ 15 ಕೋಟಿ, ಔರಂಗಾಬಾದ್ ಮೆಡಿಕಲ್ ಕಾಲೇಜ್ ಹಾಗೂ ಚಂದಾಪುರ ಮೆಡಿಕಲ್ ಕಾಲೇಜ್‌ಗೆ 7.5 ಕೋಟಿ ಹಣ ನೀಡಲಿದೆ.
ಯಾವತ್‌ಮಲ್ ಜಿಲ್ಲೆಯಲ್ಲಿ ಆರೋಗ್ಯ ಸಮಸ್ಯೆಯಿಂದ ಜನರು ಹೆಚ್ಚು ಆತ್ಮಹತ್ಯೆಗೆ ಶರಣಾಗುತ್ತಿರುವ ಕಾರಣ ಅಲ್ಲಿ ಹೆಚ್ಚಿನ ಹಣ ನೀಡಲಾಗಿದೆ.
Click this button or press Ctrl+G to toggle between Kannada and English