ತಲ್ವಾರ್ ಹಿಡಿದು ಯುವಕರ ಮೇಲೆ ಹಲ್ಲೆ ಆರೋಪ, ಸುರೇಂದ್ರ ಶೆಟ್ಟಿ ಸೇರಿ ಮೂವರ ಬಂಧನ..!

9:57 AM, Friday, June 22nd, 2018
Share
1 Star2 Stars3 Stars4 Stars5 Stars
(No Ratings Yet)
Loading...

surendra-shettyಮಂಗಳೂರು: ತಲ್ವಾರ್ ಹಿಡಿದುಕೊಂಡು ಜೂ. 11ರಂದು ಬಂಟ್ವಾಳದ ಬಡ್ಡಕಟ್ಟೆಯಲ್ಲಿ ಯುವಕರ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ ಆರೋಪಿ, ನಟ ಸುರೇಂದ್ರ ಮತ್ತು ಇನ್ನಿಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ಸತೀಶ್ ಕುಲಾಲ್ ಹಾಗೂ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಪೃಥ್ವಿರಾಜ್ ಜೆ. ಶೆಟ್ಟಿ (35) ಎಂಬಾತನನ್ನು ಕೂಡ ಬಂಧಿಸಲಾಗಿದೆ.

ಜೂ. 11ರಂದು ಬಡ್ಡಕಟ್ಟೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರಾದ ಗಣೇಶ್ ರೈ, ಪುಷ್ಪರಾಜ್, ಮನೋಜ್ ಮತ್ತು ಇತರರ ಮೇಲೆ ಆರೋಪಿ ಸುರೇಂದ್ರ ಕೊಲೆ ಯತ್ನ ನಡೆಸಿದ್ದ ಎನ್ನಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English