ಬೆಂಗಳೂರು: ಇಂದಿನಿಂದ ನಮ್ಮ ಮೆಟ್ರೋ 3 ಬೋಗಿಗಳಿಂದ 6 ಬೋಗಿಯಾಗಿ ಮಾರ್ಪಾಡಾಗುತ್ತಿದೆ. ಇದನ್ನು ಸಂಜೆ 5:30ಕ್ಕೆ ಚಾಲನೆಗೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಡಿ.ಸಿ.ಎಂ ಪರಮೇಶ್ವರ್ ಚಾಲನೆ ನೀಡಲಿದ್ದು, ಇಂದಿನಿಂದಲೇ ಈ ಮೆಟ್ರೋ ನಗರದ ಕೆಲವೆಡೆ ಸಂಚಾರ ಪ್ರಾರಂಭಿಸಲಿದೆ.
6 ಬೋಗಿಗಳಿರುವ ಮೆಟ್ರೋ ಚಾಲನೆಗಾಗಿ ಬೈಯಪ್ಪನಹಳ್ಳಿ ಮೆಟ್ರೋ ಸ್ಟೇಷನ್‌ನಲ್ಲಿ ಮೆಟ್ರೋ ನಿಗಮ ಸಖಲ ಸಿದ್ಧತೆಯನ್ನು ಮಾಡಿಕೊಂಡಿದೆ.
ಪೂರ್ವ-ಪಶ್ಚಿಮ ಮಾರ್ಗದಲ್ಲಿ ಆರು ಬೋಗಿಯುಳ್ಳ ರೈಲು ಸಂಚಾರ ನಡೆಸಲಿದೆ. ನೇರಳೆ ಮಾರ್ಗದಲ್ಲಿ ಇಂದು ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ. ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದಲ್ಲಿ ಇಂದಿನಿಂದ ಅಧಿಕೃತವಾಗಿ 6 ಬೋಗಿ ರೈಲು ಓಡಾಟ ನಡೆಸಲಿದೆ.
ನೇರಳೆ ಮಾರ್ಗದಲ್ಲಿ ಹೆಚ್ಚು ಪ್ರಯಾಣಿಕರು ಸಂಚಾರ ಮಾಡುವುದರಿಂದ 3 ರ ಬದಲಾಗಿ 6 ಬೋಗಿ ಸೇರ್ಪಡೆ ಮಾಡಲಾಗಿದೆ. ಇನ್ನು ಹಂತ ಹಂತವಾಗಿ ಹೆಚ್ಚುವರಿ ಬೋಗಿ ಆಳವಡಿಸಿಲು BMRCL ನಿರ್ಧರಿಸಿದೆ.
ಇನ್ನು ಮುಂದೆ ನಮ್ಮ ಮೆಟ್ರೋದಲ್ಲಿ 900 ಮಂದಿ ಬದಲಾಗಿ 1800 ಮಂದಿ ಸಂಚಾರ ಮಾಡಬಹುದಾಗಿದೆ.
Click this button or press Ctrl+G to toggle between Kannada and English