ಇನ್ಮುಂದೆ ರೈಲು ನಿಲ್ದಾಣದ ಒಳಗೆ ಸೆಲ್ಪಿ ತೆಗೆದುಕೊಂಡರೆ 2 ಸಾವಿರ ರೂ. ದಂಡ!

4:57 PM, Friday, June 22nd, 2018
Share
1 Star2 Stars3 Stars4 Stars5 Stars
(No Ratings Yet)
Loading...

selfieಚೆನ್ನೈ: ಸೆಲ್ಪಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇತ್ತೀಚಿಗಷ್ಟೇ ತಮಿಳುನಾಡಿನಲ್ಲಿ ಓಡುವ ರೈಲಿನೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ಹೋಗಿ ದಿನೇಶ್‌ ಕುಮಾರ್‌ ಎಂಬ 16 ವರ್ಷದ ಬಾಲಕ ಮೃತಪಟ್ಟಿದ್ದ. ಇನ್ನೊಂದು ಪ್ರಕರಣದಲ್ಲಿ ಪಾರ್ಥಸಾರಥಿ ಎಂಬುವವ ಪ್ರಾಣ ಕಳೆದುಕೊಂಡಿದ್ದ.

ಇಂತಹ ಘಟನೆಗಳಿಂದ ಎಚ್ಚೆತ್ತಿರುವ ರೈಲ್ವೆ ಇಲಾಖೆ, ತಮಿಳುನಾಡಿನ ರೈಲ್ವು ನಿಲ್ದಾಣಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವವರಿಗೆ ಸುಮಾರು 2 ಸಾವಿರ ರೂ. ದಂಡ ಹಾಕಲು ನಿರ್ಧರಿಸಿದೆ.

ಈ ಬಗ್ಗೆ ಚೆನ್ನೈನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ರೈಲ್ವೆ ಮಂಡಳಿ, ಸೆಲ್ಪಿ ಹುಚ್ಚಿನಿಂದ ಸಾಯಿವುದು ಇಂದೇ ಕೊನೆಯಾಗಬೇಕು. ಯಾರೇ ರೈಲು ನಿಲ್ದಾಣದ ಒಳಗೆ ಸೆಲ್ಪಿ ತೆಗೆದುಕೊಂಡರೆ 2 ಸಾವಿರ ರೂ. ದಂಡ ಹಾಕಲಾಗುವುದು ಎಂದು ಹೇಳಿದೆ.

ರೈಲ್ವೆ ನಿಲ್ದಾಣಗಳ ವ್ಯಾಪ್ತಿಯಲ್ಲಿ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ ಎಂದು ರೈಲ್ವೆ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಚೆನ್ನೈನಲ್ಲಿ ರೈಲ್ವೆ ಮಂಡಳಿ ಕೈಗೊಂಡಿರುವ ಈ ನಿರ್ಧಾರವನ್ನು ಪ್ರಯಾಣಿಕರು ಸ್ವಾಗತಿಸಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಸುರಕ್ಷತೆ ಮತ್ತು ಸ್ವಚ್ಚತೆ ಬಗ್ಗೆ ಎನ್‌ಜಿಒಗಳ ಸಹಾಯದೊಂದಿಗೆ ಅರಿವು ಮೂಡಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English