ಚಿಕ್ಕಮಗಳೂರು: ದಕ್ಷಿಣ ಭಾರತದ ಮೊದಲ ಯುದ್ಧ ವಿಮಾನದ ಮಹಿಳಾ ಪೈಲಟ್ ಮೇಘನಾ ಶ್ಯಾನ್‍ಬೋಗ್‍ಗೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ ಸನ್ಮಾನಿಸಲಾಯ್ತು.
ಇಂದು ಹುಟ್ಟೂರಿಗೆ ಬಂದಿದ್ದ ಮೇಘನಾಗೆ ನಗರದ ರಂಗಣ್ಣ ಛತ್ರದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಮೇಘನಾ, ತನ್ನ ಬಾಲ್ಯ, ಕಾಲೇಜು, ಅಡ್ವೆಂಚರಸ್ ಸಾಧನೆ, ಯುದ್ಧ ವಿಮಾನದ ಪೈಲಟ್ ಆಗಲು ಪಡೆದ ಟ್ರೈನಿಂಗ್, ಸೆಲೆಕ್ಷನ್ ಹಾಗೂ ಪಟ್ಟ ಪರಿಶ್ರಮದ ಹಾದಿಯನ್ನ ಮೆಲುಕು ಹಾಕಿದ್ರು.
ಇದೇ ವೇಳೆ ನನ್ನ ಅಪ್ಪ-ಅಮ್ಮ ಇಬ್ಬರೂ ಲಾಯರ್ಸ್. ನಮ್ಮ ಮನೆಯಲ್ಲಿ ದಿನವೂ ಕೋರ್ಟ್ ಸೀನ್ ನಡೆಯುತ್ತಿತ್ತು. ನೀವು ಮುಕ್ತ ಧಾರಾವಾಹಿಯಲ್ಲಿ ನೋಡೋದು ನಮ್ಮ ಮನೆಯಲ್ಲಿ ದಿನವೂ ಇರ್ತಿತ್ತು ಎಂದು ನಕ್ಕರು.
Click this button or press Ctrl+G to toggle between Kannada and English