ಮಂಗಳೂರು: ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಮಂಗಳೂರಿನಿಂದ ಮುಡಿಪು ಮಾರ್ಗವಾಗಿ ಮೆಲ್ಕಾರ್ ಕಡೆ ಸಂಚರಿಸುವ ರಸ್ತೆಯ ಮಿತ್ತಕೋಡಿ ಎಂಬಲ್ಲಿ ಗುಡ್ಡವೊಂದು ಮುಖ್ಯ ರಸ್ತೆಗೆ ಕುಸಿದು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೊಡಕುಂಟಾದ ಘಟನೆ ಕಳೆದ ತಡರಾತ್ರಿ ನಡೆದಿದೆ.
ಮುಡಿಪು ಸಮೀಪದ ಮಿತ್ತಕೋಡಿ ಬಳಿ ಗುಡ್ಡವು ಭಾರೀ ಪ್ರಮಾಣದಲ್ಲಿ ಸಂಪರ್ಕ ರಸ್ತೆಗೆ ಕುಸಿದಿದೆ. ಇದರಿಂದಾಗಿ ಈ ಭಾಗದಲ್ಲಿ ಸಂಚರಿಸುವ ವಾಹನಗಳಿಗೆ ತೊಡಕುಂಟಾಗಿದೆ. ಈ ಹಿನ್ನೆಲೆಯಲ್ಲಿ ಮೆಲ್ಕಾರ್ ಕಡೆಗೆ ಸಂಚರಿಸುವ ವಾಹನವು ಪಜೀರು-ಕಂಬ್ಲಪದವು ಮಾರ್ಗವಾಗಿ ಹಾಗೂ ಕುರ್ನಾಡು ಮಾರ್ಗವಾಗಿ ಸಂಚರಿಸುವಂತಾಗಿದೆ.
ಮಧ್ಯರಾತ್ರಿ ಈ ಗುಡ್ಡ ಕುಸಿದಿರುವುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ.
Click this button or press Ctrl+G to toggle between Kannada and English