ಮಂಗಳೂರು: ಎಸ್ ಡಿ ಪಿ ಐ ಪಕ್ಷದ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ಅಥಾವುಲ್ಲಾ ಜೋಕಟ್ಟೆ ಆಯ್ಕೆಯಾಗಿದ್ದಾರೆ.
ಮಿತ್ತೂರಿನ ಫ್ರೀಡಂ ಕಮ್ಯುನಿಟಿ ಹಾಲ್ ನಲ್ಲಿ ನಡೆದ ಪಕ್ಷದ ಜಿಲ್ಲಾ ಪ್ರತಿನಿಧಿಗಳ ಸಭೆಯ ಬಳಿಕ ನಡೆದ ಆಂತರಿಕ ಚುನಾವಣೆಯಲ್ಲಿ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರದ ಪ್ರತಿನಿಧಿಗಳು ಮತದಾನದ ಮೂಲಕ ಮುಂದಿನ ಮೂರು ವರ್ಷಗಳ ಅವಧಿಯ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಿದರು.
ಉಪಾಧ್ಯಕ್ಷರಾಗಿ ಇಕ್ಬಾಲ್ ಗೂಡಿನಬಳಿ, ಆಂಟನಿ.ಪಿ.ಡಿ, ಪ್ರಧಾನ ಕಾರ್ಯದರ್ಶಿಯಾಗಿ ಶಾಹುಲ್ ಎಸ್. ಎಚ್, ಕಾರ್ಯದರ್ಶಿಯಾಗಿ ಇಕ್ಬಾಲ್ ಬೆಳ್ಳಾರೆ,ಆಶ್ರಫ್ ಮಂಚಿ ಕೋಶಾಧಿಕಾರಿ ನೂರುಲ್ಲಾ ಕುಳಾಯಿ ಜಿಲ್ಲಾ ಪದಾಧಿಕಾರಿಗಳಾಗಿ ಆಯ್ಕೆಯಾದರು.
ಸಮಿತಿ ಸದಸ್ಯರಾಗಿ ಹನೀಫ್ ಖಾನ್ ಕೊಡಾಜೆ , ಯೂಸುಫ್ ಆಲಡ್ಕ, ಆನಂದ ಮಿತ್ತಬೈಲ್, ಜಾಬಿರ್ ಅರಿಯಡ್ಕ,ಅಕ್ಬರ್ ಬೆಳ್ತಂಗಡಿ, ಅಯಾಝ್ ಕೃಷ್ಣಾಪುರ, ಮುನೀಬ್ ಬೆಂಗ್ರೆ, ಝಹಿದ್ ಮಲಾರ್ ಆಯ್ಕೆಯಾದರು.
ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಹನ್ನಾನ್ , ರಾಜ್ಯ ಕೋಶಾಧಿಕಾರಿಯಾದ ಶೇಖ್ ಸಿರಾಜ್ ನೇತೃತ್ವದಲ್ಲಿ ಚುನಾವಣೆ ನಡೆಯಿತು.
Click this button or press Ctrl+G to toggle between Kannada and English