ಮುಂಬೈ: ದೇಶದಲ್ಲಿ ಹೆಚ್ಚುವರಿಯಾಗಿ ಎರಡು ಪೆಟ್ರೋಲಿಯಂ ಸಂಗ್ರಹಾಗಾರ ಸ್ಥಾಪನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಕರ್ನಾಟಕ ಮತ್ತು ಒಡಿಶಾದಲ್ಲಿ 6.5 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯದ ಸಂಗ್ರಹಾಗಾರ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಕರ್ನಾಟಕದ ಪಾದೂರಿನಲ್ಲಿ 2.5 ಮಿಲಿಯನ್ ಮೆಟ್ರಿಕ್ ಟನ್ ಹಾಗೂ ಒಡಿಶಾದ ಚಂಡಿಕೋಲ್ನಲ್ಲಿ 4.4 ಮಿಲಿಯನ್ ಮೆಟ್ರಿಕ್ ಟನ್ ಪೆಟ್ರೋಲಿಯಂ ಸಂಗ್ರಹಾಗಾರ ಸ್ಥಾಪನೆ ಮಾಡಲಾಗುತ್ತಿದೆ.
ಈಗಾಗಲೇ ಭಾರತ 5.33 ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯದ ಮೂರು ಪೆಟ್ರೋಲಿಯಂ ಸಂಗ್ರಹಾಗಾರ ಹೊಂದಿದ್ದು, 10 ದಿನಗಳಿಗೆ ಪೂರೈಕೆ ಆಗುವ ಕಚ್ಚಾ ತೈಲ ಸಂಗ್ರಹವಾಗುತ್ತಿದೆ.
ಇದೀಗ ಮತ್ತೆರಡು ಪೆಟ್ರೋಲಿಯಂ ಸಂಗ್ರಹಾಗಾರಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಇದರಿಂದ ಹೆಚ್ಚುವರಿ 12 ದಿನಗಳ ಕಾಲ ಕಚ್ಚಾ ತೈಲ ಪೂರೈಕೆ ಆಗಲಿದೆ.
Click this button or press Ctrl+G to toggle between Kannada and English