ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸುತ್ತಿರುವ ಉರ್ವ ಮಾರುಕಟ್ಟೆಯ ಕಾಮಗಾರಿಯನ್ನು ಮಂಗಳೂರು ನಗರ ದಕ್ಷಿಣದ ಶಾಸಕ ವೇದವ್ಯಾಸ್ ಕಾಮತ್ ಅವರು ಭೇಟಿ ನೀಡಿ ಪರಿಶೀಲಿಸಿದರು.
ತಳ ಮಹಡಿಯಲ್ಲಿರುವ ಮೀನು ಮತ್ತು ಮಾಂಸದ ಅಂಗಡಿಗಳ ಬಗ್ಗೆ,ನೆಲ ಮಹಡಿಯ ತರಕಾರಿ ಹಾಗೂ ಹಣ್ಣುಹಂಪಲು ಮಳಿಗೆಗಳನ್ನು ವೀಕ್ಷಣೆ ಮಾಡಿ,ಎರಡನೇ ಮತ್ತು ಮೂರನೇ ಮಹಡಿಯಲ್ಲಿ ನಿರ್ಮಾಣವಾಗುತ್ತಿರುವ ಕಚೇರಿ ಸ್ಥಳಾವಕಾಶದ ಮಾಹಿತಿಯನ್ನು ಪಡೆದುಕೊಂಡರು.ಕಟ್ಟಡದ ಎಂಜಿನಿಯರ್ ಅವರನ್ನು ಕರೆದು ಇಲ್ಲಿನ ತ್ಯಾಜ್ಯ ನಿರ್ವಹಣೆಯನ್ನು ಯಾವ ರೀತಿ ಮಾಡಲಾಗುತ್ತಿದೆ.
ಇಡೀ ಮಾರುಕಟ್ಟೆಗೆ ನೀರು ಒದಗಿಸಲು ಸಂಪು ಮತ್ತು ಓವರ್ ಹೆಡ್ ಟ್ಯಾಂಕ್ ಎಷ್ಟು ಸಾವಿರ ಲೀಟರ್ ಗಳ ವ್ಯವಸ್ಥೆ ಮಾಡಲಾಗಿದೆ ಮುಂತಾದ ಎಲ್ಲಾ ಮಾಹಿತಿ ಪಡೆದುಕೊಂಡರು.ವಾಹನ ನಿಲುಗಡೆಯ ಸ್ಥಳವನ್ನು ಪರಿಶೀಲಿಸಿದರು.
ಈ ಸಂಧರ್ಭದಲ್ಲಿ ಮೂಡ ಆಯುಕ್ತ ಶ್ರೀಕಾಂತ್ ರಾವ್,ಸರ್ವೇಯರ್ ಮೋಹನ್,ಗುತ್ತಿಗೆದಾರ ಸಿಕೋ ಆಸಿಫ್,ಮ.ನ.ಪ ಸದಸ್ಯೆ ಜಯಂತಿ ಆಚಾರ್,ಮ.ನ.ಪ.ರಾಧಾಕೃಷ್ಣ,ಮುಖಂಡರಾದ ವಿನಯ್ ಎಲ್ ಶೆಟ್ಟಿ,ವಸಂತ್ ಜೆ ಪೂಜಾರಿ, ಮೋಹನ್ ಆಚಾರ್ಯ,ಗುರು ಚರಣ್ ಎಚ್.ಆರ್,ಕಿಶೋರ್,ಆಶಾ ಜಗದೀಶ್ ಜೊತೆಗಿದ್ದರು.
Click this button or press Ctrl+G to toggle between Kannada and English