ಬೆಂಗಳೂರು: ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ ನಡೆದಿದ್ದ ನ್ಯಾಷನಲ್ ಕಿಕ್‌ಬಾಕ್ಸಿಂಗ್ ಸ್ಪರ್ಧೆಯಲ್ಲಿ ಆರು ಚಿನ್ನ, ಐದು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗೆದ್ದ ಕರ್ನಾಟಕ ಕಿಕ್‌ಬಾಕ್ಸಿಂಗ್ ತಂಡದ 12 ಮಕ್ಕಳನ್ನು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ಕೆಪಿಸಿಸಿ ಕಚೇರಿಯಲ್ಲಿ ಅಭಿನಂದಿಸಿದರು.
ಇಂದು ರಾಜ್ಯಕ್ಕೆ ಮರಳಿದ ಸಾಧಕರನ್ನು ಕೆಪಿಸಿಸಿ ಕಚೇರಿಗೆ ಕರೆಸಿಕೊಂಡು ಅಭಿನಂದಿಸಿದ ಪರಮೇಶ್ವರ್, ಇಂತಹ ಸಾಧನೆ ನಿಮ್ಮಿಂದ ಇನ್ನಷ್ಟು ಆಗಲಿ. ಸರ್ಕಾರದಿಂದ ನಿಮಗೆ ಸದಾ ಪ್ರೋತ್ಸಾಹ ಇರಲಿದೆ ಎಂದು ಭರವಸೆ ನೀಡಿದರು.
ರಾಜ್ಯದ ಎಲ್ಲಾ ಭಾಗದ ಕ್ರೀಡಾಸಕ್ತರು, ಪಟುಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಲಿದೆ. ಮುಂದಿನ ದಿನಗಳಲ್ಲಿ ಕ್ರೀಡೆಗೆ ಇನ್ನಷ್ಟು ಉತ್ತೇಜನ ಸಿಗಲಿದೆ. ರಾಜ್ಯ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಹಾಗೂ ವಿಶೇಷ ಉತ್ತೇಜನ ನೀಡುತ್ತೇವೆ. ದೇಶದಲ್ಲಿಯೇ ಮಾದರಿ ಎನಿಸುವ ಮೂಲಸೌಕರ್ಯ ಒದಗಿಸಿ ಪ್ರತಿಭೆಗಳನ್ನು ಹೊರತರುವ ಕಾರ್ಯ ಮಾಡಲಿದ್ದೇವೆ ಎಂದರು.
Click this button or press Ctrl+G to toggle between Kannada and English