ಮಂಗಳೂರು : ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಮುಗಿಸಿ ನಗರದ ಕಾವೂರು ಶಾಂತಿ ನಗರದಲ್ಲಿ ಕುರುಬರ ಸಂಘದಿಂದ ನಿರ್ಮಿಸಲಾಗಿರುವ ಕನಕಭವನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಭೇಟಿ ನೀಡಿದರು.
ಕಾವೂರಿನಲ್ಲಿ ಕನಕ ಭವನಕ್ಕೆ ತೆರಳಿ ಕಟ್ಟಡ ವೀಕ್ಷಿಸಿ ಕುರುಬ ಸಮುದಾಯದ ಜನರ ಜತೆ ಮಾತನಾಡಿದರಲ್ಲದೆ, ಸಂಘವು ಇಲ್ಲಿ ನಡೆಸುತ್ತಿರುವ ಚಟುವಟಿಕೆಗಳ ಮಾಹಿತಿ ಪಡೆದರು.
‘‘ನಾನು ಚಿಕಿತ್ಸೆಗಾಗಿ ಬಂದಿದ್ದೆ. ಅದನ್ನು ಮುಗಿಸಿ ಹೊರಟಿರುವೆ. ಏನಾದರು ಮಾತನಾಡಲಿದ್ದರೆ ನಾನೇ ಕರೆಯುತ್ತೇನೆ’’ ಎಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಹೇಳಿದರು.
ಈ ಸಂದರ್ಭ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಮೊಯ್ದಿನ್ ಬಾವಾ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English