ರೈಲ್ವೆ ನಿಲ್ದಾಣಗಳಲ್ಲಿ ರೈಲ್ವೆ ಇಲಾಖೆ ಪ್ಲಾಸ್ಟಿಕ್ ಬಾಟಲ್ ಎಸೆಯಲು ಕ್ರಷರ್ ಯಂತ್ರ..!

1:55 PM, Friday, June 29th, 2018
Share
1 Star2 Stars3 Stars4 Stars5 Stars
(No Ratings Yet)
Loading...

railwayಆಂಧ್ರ ಪ್ರದೇಶ: ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಮಹತ್ವದ ಕಾರ್ಯ ಕೈಗೊಂಡಿದೆ. ರೈಲ್ವೆ ನಿಲ್ದಾಣಗಳಲ್ಲಿ ರೈಲ್ವೆ ಇಲಾಖೆ ಪ್ಲಾಸ್ಟಿಕ್ ಬಾಟಲ್ ಎಸೆಯಲು ಕ್ರಷರ್ ಯಂತ್ರಗಳನ್ನು ಸ್ಥಾಪಿಸಲಾಗಿದೆ.

ತೆಲಂಗಾಣದ ಸಿಕಿಂದರಾಬಾದ್, ಕಾಚಿಗುಡ ಮತ್ತು ನಿಜಾಮಾಬಾದ್ ಹಾಗೂ ಆಂಧ್ರ ಪ್ರದೇಶದ ವಿಜಯವಾಡ ರೈಲ್ವೆ ನಿಲ್ದಾಣಗಳಲ್ಲಿ ದಕ್ಷಿಣ ಮಧ್ಯ ರೈಲ್ವೆ ಈ ಬಾಟಲ್ ಕ್ರಷರ್ ಯಂತ್ರಗಳನ್ನು ಅಳವಡಿಸಿದೆ.

ಪ್ಲಾಸ್ಟಿಕ್ಗಳ ಮರು ಉತ್ಪನ್ನ ಮತ್ತು ಮರುಬಳಕೆ ಮಾಡಲೆಂದು ಯಂತ್ರಗಳನ್ನು ಸ್ಥಾಪಿಸಲಾಗಿದೆ. ಫ್ರಿಡ್ಜ್ ಮಾದರಿಯಲ್ಲಿ ಈ ಯಂತ್ರಗಳಿದ್ದು, ಒಂದು ದಿನದಲ್ಲಿ ಸುಮಾರು 5,000 ಪ್ಲಾಸ್ಟಿಕ್ಗಳನ್ನು ಯಂತ್ರದಲ್ಲಿ ಹಾಕಬಹುದಾಗಿದೆ.

ಯಂತ್ರದೊಳಗೆ ಹಾಕಿದ ಪ್ಲಾಸ್ಟಿಕ್ ಪೀಸ್ಗಳಾಗಿ ಹೊರಬರಲಿದ್ದು, ಇದನ್ನು ಟಿ-ಶರ್ಟ್ ಹಾಗೂ ಪ್ಲಾಸ್ಟಿಕ್ ಬ್ಯಾಗ್ಗಳಾಗಿ ಮರು ಉತ್ಪಾನ ಮಾಡಲು ಬಳಸಬಹುದಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English