ನೆಟ್ಟ ಗಿಡಗಳ ರಕ್ಷಣೆಯೂ ನಮ್ಮ ಹೊಣೆ : ಸತ್ಯಾ ಕೆ

9:21 PM, Saturday, June 30th, 2018
Share
1 Star2 Stars3 Stars4 Stars5 Stars
(No Ratings Yet)
Loading...
vanamahotsava
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮ ಶನಿವಾರ ಪತ್ರಿಕಾಭವನ ಆವರಣದಲ್ಲಿ ನಡೆಯಿತು.

ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಪತ್ರಕರ್ತೆ, ವಾರ್ತಾ ಭಾರತಿ ಪತ್ರಿಕೆಯ ವರದಿಗಾರ್ತಿ ಸತ್ಯಾ ಕೆ ಮಾತನಾಡಿ,  ಕೇವಲ ಪರಿಸದ ಬಗ್ಗೆ ಮಾತನಾಡಿದರೆ ಸಾಲದು, ಪರಿಸರ ರಕ್ಷಣೆಯಲ್ಲಿ ಪ್ರತಿಯೊಬ್ಬರ ಹೊಣೆಗಾರಿಯೂ ಇದೆ. ಮಕ್ಕಳಲ್ಲಿ ಪರಿಸರ ಪ್ರೇಮವನ್ನು ಬಿತ್ತುವ ಕಾರ್ಯ ಹೆಚ್ಚಾಗಿ ಆಗಬೇಕು. ಭವಿಷ್ಯದ ದೃಷ್ಟಿಯಿಂದ ಜನತೆಯನ್ನು ಎಚ್ಚರಿಸುವ ರೀತಿಯಲ್ಲಿ ಪ ರಿಸರ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು ಎಂದರು.

ಗಿಡಗಳನ್ನು ನೆಡುವುದಷ್ಟೇ ಮುಖ್ಯವಲ್ಲ, ಅವುಗಳ ರಕ್ಷಣೆಯೂ ಅತಿಮುಖ್ಯ. ತಮ್ಮ ತಮ್ಮ ಪರಿಸರದಲ್ಲಿರುವ ಖಾಲಿ ಜಾಗದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸವಾಗಬೇಕು. ಮೊದಲು ನಮ್ಮೊಳಗೆ ಬದಲಾವಣೆಗಳಾದರೆ ಮಾತ್ರ ಇದು ಸಾಧ್ಯ. ಪರಿಸರ ಯಾಕೆ ಬೇಕು ಎಂಬುದುನ್ನು ಮನಗಾಣಬೇಕು. ಒಳ್ಳೆಯ ಗಾಳಿಯ ಸೇವನೆಯೊಂದಿಗೆ ನಮ್ಮ ಆರೋಗ್ಯ ಸುಸ್ಥಿತಿಯಲ್ಲಿರಬೇಕಾದರೆ ಒಂದಷ್ಟು ಮರಗಳು ನಮ್ಮ ಸುತ್ತಮುತ್ತ ಇರಲೇಬೇಕು. ಮನುಕುಲದ ಉಳಿವಿಗೆ ಉತ್ತಮ ಪರಿಸರದ ಅಗತ್ಯವಿದೆ ಎಂದವರು ನುಡಿದರು.

ಅರಣ್ಯ ಇಲಾಖೆ ಪ್ರತಿವರ್ಷ ವನಮಹೋತ್ಸವ ಕಾರ್ಯಕ್ರಮದ ಮೂಲಕ ಜನತೆಯಲ್ಲಿ ಪರಿಸರ ಜಾಗೃತಿ ಮೂಡಿಸುತ್ತಿದೆ. ಪತ್ರಕರ್ತರ ಸಂಘ ಕೂಡ ಇದರೊಂದಿಗೆ ತೊಡಗಿಸಿಕೊಂಡು ಪರಿಸರ ರಕ್ಷಣೆಯಲ್ಲಿ ತನ್ನ ಕೊಡುಗೆ ನೀಡುತ್ತಿದೆ ಎಂದು ಸತ್ಯಾ ಕೆ ಹೇಳಿದರು.

ಮಂಗಳೂರು ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್ ಮಾತನಾಡಿ, ಗಿಡನೆಡಲು ಜಾಗ ಎಲ್ಲಿದೆ ಎಂದು ಹುಡುಕುವ ಮೊದಲು ಮನಸ್ಸಿನಲ್ಲಿ ಮೊದಲು ಜಾಗ ನೀಡಬೇಕು. ಪರಿಸರ ಪ್ರೀತಿಯಿದ್ದರೆ ಗಿಡಗಳನ್ನು ನೆಡಲು ಜಾಗ ಸಿಕ್ಕೇ ಸಿಗುತ್ತದೆ. ಸಾರ್ವಜನಿಕರು ಅರಣ್ಯ ರಕ್ಷಣೆಗೆ ಆದ್ಯತೆ ನೀಡಬೇಕು ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ಪತ್ರಕರ್ತರಾದ ರಾಮಕೃಷ್ಣ ಆರ್., ಇಬ್ರಾಹಿಂ ಅಡ್ಕಸ್ಥಳ, ಪ್ರಕಾಶ್ ಮಂಜೇಶ್ವರ, ಜಿತೇಂದ್ರ ಕುಂದೇಶ್ವರ, ಗಣೇಶ್ ಮಾವಂಜಿ, ಸುರೇಶ್ ಡಿ. ಪಳ್ಳಿ, ವಿದ್ಯಾಧರ ಶೆಟ್ಟಿ, ದಯಾನಂದ ಕುಕ್ಕಾಜೆ, ಭಾಸ್ಕರ ರೈ, ಜೀವನ್ ಮೊದಲಾದವರಿದ್ದರು.

ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English