ಉಡುಪಿ: ಬಾಲ್ಯದಲ್ಲೇ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಬಾಚಿಕೊಂಡ ಕರಾವಳಿಯ ಬೆಡಗಿ ಶಾಸ್ತ್ರ ಎಸ್.ಶೆಟ್ಟಿ ಇದೀಗ ಕೇರಳದ ಕೊಚ್ಚಿಯಲ್ಲಿ ಇತ್ತೀಚೆಗೆ ನಡೆದ ಸ್ಪರ್ಧೆಯಲ್ಲಿ ‘ಮಿಸ್ ಕ್ವೀನ್ ಕರ್ನಾಟಕ’ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ.
5 ದಿನದ ಸ್ಪರ್ಧೆಯಲ್ಲಿ ದಕ್ಷಿಣ ಭಾರತದಿಂದ ಸುಮಾರು 22 ಸ್ಪರ್ಧಿಗಳು ಭಾಗವಹಿಸಿದ್ದರು. ತೀವ್ರ ಸ್ಪರ್ಧೆ ಎದುರಿಸಿ, ಐದು ಸುತ್ತಿನಲ್ಲಿ ತಾವು ಒಬ್ಬರಾಗಿ ‘ಮಿಸ್ ಕ್ವೀನ್ ಕರ್ನಾಟಕ’ ಪಟ್ಟ ಆಲಂಕರಿಸಿದ್ದಾರೆ ಶಾಸ್ತ್ರ.
ಮೂವತ್ತು ದೇಶಗಳ ಸ್ಪರ್ಧಿಗಳಿಂದ ತೀವ್ರ ಸ್ಪರ್ಧೆ ಎದುರಿಸಿ ಗೆಲುವಿನ ನಗೆ ಬೀರಿರುವ ಶಾಸ್ತ್ರ ಉಡುಪಿಯ ಶಶಿ ಶೆಟ್ಟಿ, ಶರ್ಮಿಳಾ ದಂಪತಿಗಳ ಪುತ್ರಿ.
ಸ್ಪರ್ಧೆಯಲ್ಲಿ ಕರಾವಳಿ ಮಣ್ಣಿನ ಕಲೆ ಯಕ್ಷಗಾನದ ವೇಷಭೂಷಣವನ್ನು ಪ್ರಸ್ತುತಪಡಿಸಿ ಹೆಚ್ಚಿನ ಅಂಕ ಗಳಿಸಿದ್ದು ವಿಶೇಷ. ಬಾಲ್ಯದಲ್ಲೇ ಪತ್ರಕರ್ತೆಯಾಗುವ ಕನಸು ಕಂಡ ಶಾಸ್ತ್ರ, ಮೂರು ಸೌಂದರ್ಯ ಸ್ಪರ್ಧೆಗಳಲ್ಲಿ ಗೆದ್ದು, ರಾಯಭಾರಿಯಾಗುವ ಕನಸು ಕಂಡಿದ್ದಾಳೆ.
5 ಅಡಿ 6 ಇಂಚಿನ ಈಕೆ ಈಗಾಗಲೇ ಮಿಸ್ ಕರಾವಳಿ ಐಕಾನ್, ಮಿಸ್ ಮಂಗಳೂರು ಸ್ಪರ್ಧೆಯಲ್ಲಿ ಗೆದ್ದು 2018ರ ಜನವರಿಯಲ್ಲಿ ನಡೆಯುವ ಮಿಸ್ ಸೌತ್ ಇಂಡಿಯಾ ಸೌಂದರ್ಯ ಸ್ಪರ್ಧೆಗೆ ನೇರ ಪ್ರವೇಶ ಪಡೆದಿದ್ದಾಳೆ.
ಶಾಸ್ತ್ರಳ ಸಾಧನೆಗೆ ಪೋಷಕರು ಸಂಪೂರ್ಣ ಪ್ರೋತ್ಸಾಹ ನೀಡಿದ್ದಾರೆ. ಸದ್ಯ ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಶನ್ ನಲ್ಲಿ ಅಂತಿಮ ವರ್ಷದ ಮಾಧ್ಯಮ ಮತ್ತು ಸಂವಹನ ಪದವಿಯಲ್ಲಿ ಒದುತ್ತಿರುವ ಶಾಸ್ತ್ರ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಲೇ, ಭಾರತೀಯ ನಾಗರಿಕ ಸೇವೆ ಪರೀಕ್ಷೆ ಬರೆದು ಎರಡು ದೇಶಗಳ ನಡುವೆ ರಾಯಭಾರಿಯಾಗುವ ಬಯಕೆ ಹೊಂದಿದ್ದಾಳೆ.
Click this button or press Ctrl+G to toggle between Kannada and English