“ಬಂಗಾರದ ಎಲೆಗಳು”’ ಮಾಹಿತಿ ಕೋಶಕ್ಕೆ ಕನ್ನಡ ಲೇಖಕ/ ಸಾಹಿತಿಗಳ ಪ್ರಬಂಧಗಳ ಆಹ್ವಾನ

11:28 PM, Tuesday, July 3rd, 2018
Share
1 Star2 Stars3 Stars4 Stars5 Stars
(No Ratings Yet)
Loading...

Golden Leafಮಂಗಳೂರು  : ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು `ಬಂಗಾರದ ಎಲೆಗಳು’ ಎಂಬ ಹೆಸರಿನ ಕನ್ನಡ ಲೇಖಕ/ ಸಾಹಿತಿಗಳ ಮಾಹಿತಿ ಕೋಶವನ್ನು ಸಿದ್ಧಪಡಿಸುವ ಯೋಜನೆಯನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ.

ಕ್ರಿ.ಶ1820 ರಿಂದ 2020 ರ ವರೆಗಿನ ಕನ್ನಡ ಸಾಹಿತಿಗಳ ಸಂಕ್ಷಿಪ್ತ ಮಾಹಿತಿಯನ್ನು ಸಂಗ್ರಹಿಸಿ ಎಂಟು ಸಂಪುಟಗಳಲ್ಲಿ ಪ್ರಕಟಿಸುವ ಯೋಜನೆಯು ಇದಾಗಿದೆ. ಲೇಖಕರ ಸಂಕ್ಷಿಪ್ತ ಪರಿಚಯ, ಅವರ ಪ್ರಕಟಿತ ಅಥವಾ ಅಪ್ರಕಟಿತ ಪ್ರಬಂಧಗಳ ಜೆರಾಕ್ಸ್ ಪ್ರತಿಗಳನ್ನು ಹಾಗೂ ಅವರ ಭಾವಚಿತ್ರವನ್ನು ಕಳುಹಿಸಿಕೊಡುವಂತೆ ಕೋರಲಾಗಿದೆ.

ವೈಯಕ್ತಿಕವಾಗಿ ಅಥವಾ ಸಂಘ ಸಂಸ್ಥೆಗಳು ಕೂಡಾ ಸಾಹಿತಿಗಳ ಮಾಹಿತಿಗಳನ್ನು ಸಂಗ್ರಹಿಸಿ ಕೂಡಲೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಶ್ರೀ ಕೃಷ್ಣ ಸಂಕೀರ್ಣ, ಮಹಾತ್ಮಗಾಂಧಿ ರಸ್ತೆ, ಕೊಡಿಯಾಲ್‌ಬೈಲ್ ಮಂಗಳೂರು, ಇಮೇಲ್: pradeepa.kalkura@gmail.com , 9845083736 (whats app) ಈ ವಿಳಾಸಕ್ಕೆ ಕಳುಹಿಸಿಕೊಂಡುವಂತೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ವಿನಂತಿಸಿದ್ದಾರೆ.

         

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English