ಚಿಕ್ಕಮಗಳೂರು: ನೆಚ್ಚಿನ ವ್ಯಕ್ತಿವೊಬ್ಬರನ್ನು ನೋಡಬೇಕೆಂದು ಪಟ್ಟು ಹಿಡಿದಿದ್ದ ವೃದ್ಧರ ಆಸೆಯನ್ನು ಈಡೇರಿಸಿ ಮಾನವೀಯತೆ ಮೆರೆದಿದ್ದಾರೆ ಚಿಕ್ಕಮಗಳೂರಿನ ಎಸ್ಪಿ ಅಣ್ಣಾಮಲೈ.
ಹೌದು..ಕಳೆದೊಂದು ವರ್ಷದಿಂದ ಅಣ್ಣಾಮಲೈ ಅವರನ್ನು ನೋಡಲೇಬೇಕೆಂದು ಚಿಕ್ಕಮಗಳೂರಿನ ಅನ್ನಪೂರ್ಣೇಶ್ವರಿ ವೃದ್ಧಾಶ್ರಮದಲ್ಲಿ ಈ ಹಿರಿಯ ಜೀವಗಳು ಪಟ್ಟು ಹಿಡಿದಿದ್ದರು. ಈಗ ಅವರ ಆಸೆಗೆ ಸಿಂಗಂ ಸ್ಪಂದಿಸಿದ್ದಾರೆ.
ಇಂದು ದಿಢೀರ್ನೆ ವೃದ್ಧಾಶ್ರಮಕ್ಕೆ ಭೇಟಿ ನೀಡುವ ಮೂಲಕ ವೃದ್ಧರ ಕುಶಲೋಪರಿ ವಿಚಾರಿಸಿದರು. ನೆಚ್ಚಿನ ವ್ಯಕ್ತಿಯನ್ನು ಕಂಡು ವೃದ್ಧರು ಸಹ ಸಂತೋಷಗೊಂಡು ಕಣ್ಣೀರಿಟ್ಟು ಅಳಲು ತೋಡಿಕೊಂಡರು.
Click this button or press Ctrl+G to toggle between Kannada and English