ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ಗೆ ಕ್ಷಣಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಮಂಡಿಸಲಿರುವ ಬಜೆಟ್ನಲ್ಲಿ ಕೃಷಿ ಸಾಲ ಮನ್ನಾ ಆಗುವ ಬಗ್ಗೆ ರೈತ ಸಮೂಹ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ.
ಮೈಸೂರು ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್, ವಾಣಿಜ್ಯ ಬ್ಯಾಂಕ್ಗಳಲ್ಲಿ ಎಲ್ಲಾ ತರಹದ ಕೃಷಿ ಸಾಲ ಸೇರಿ ಜಿಲ್ಲೆಯ 1.70 ಲಕ್ಷ ರೈತರು ಸುಮಾರು 7 ಸಾವಿರ ಕೋಟಿ ರೂ. ಸಾಲ ಹೊಂದಿದ್ದಾರೆ. 65 ಸಾವಿರಕ್ಕೂ ಹೆಚ್ಚು ರೈತರು ಸಹಕಾರಿ ಬ್ಯಾಂಕಿನಲ್ಲಿ 526 ಕೋಟಿ ರೂ. ಸಾಲ ಮಾಡಿದ್ದಾರೆ. ಇದರಲ್ಲಿ ಸಣ್ಣ ರೈತರು 52 ಸಾವಿರ, 13 ಸಾವಿರ ಮಧ್ಯಮ ರೈತರಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸುಮಾರು 6500 ಕೋಟಿ ರೂ. ಸಾಲ ಮಾಡಿರುವ ರೈತರು, ಬಡ್ಡಿ ಸೇರಿದರೆ ಮತ್ತುಷ್ಟು ಹೆಚ್ಚಾಗಲಿದೆ ಎನ್ನಲಾಗಿದೆ. ಇನ್ನು ಸಣ್ಣ ಹಣಕಾಸು ಸಂಸ್ಥೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಲ್ಲೂ ರೈತರು ಸಾಲ ಮಾಡಿದ್ದಾರೆ. ಕೆಲವರು ಚಿನ್ನ ಅಡವಿಟ್ಟಿದ್ದಾರೆ. ಸಾಲ ನೀಡಿದವರ ಪಟ್ಟಿಯಲ್ಲಿ ಲೇವಾದೇವಿದಾರರು ಇದ್ದು, ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿದ್ದಾರೆಂಬ ಆರೋಪವಿದೆ.
ಇನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಈ ಹಿಂದೆಯೇ ಘೋಷಣೆ ಮಾಡಿದ್ದು, ಇದಕ್ಕಾಗಿ ಎಲ್ಲಾ ಇಲಾಖೆಗಳ ಅಧಿಕಾರಿಗಳ ಜೊತೆ ಹಾಗೂ ಆರ್ಧಿಕ ತಜ್ಞರ ಸಲಹೆ ಪಡೆದು ಸಂಪನ್ಮೂಲ ಕ್ರೋಢೀಕರಣ ಮಾಡುತ್ತಿದ್ದಾರೆ.
ಯಾವ ರೀತಿಯ ಸಾಲ ಎಂಬುದನ್ನು ಬ್ಯಾಂಕ್ಗಳಲ್ಲಿ ಇನ್ನೂ ವಿಭಾಗೀಕರಣ ಮಾಡಿಲ್ಲ. ಕೃಷಿ ಉದ್ದೇಶಕ್ಕೆ 1 ಲಕ್ಷ ಸಾಲ ಮಾಡಿದವರೂ ಇದ್ದಾರೆ. 25 ಲಕ್ಷ ಸಾಲ ಮಾಡಿದವರೂ ಇದ್ದಾರೆ. ಕೃಷಿ ಸಾಲ, ನೀರಾವರಿ ಉದ್ದೇಶದ ಸಾಲ, ಕೃಷಿ ಯಂತ್ರ ಖರೀದಿ ಸಾಲ, ಟ್ರ್ಯಾಕ್ಟರ್ ಖರೀದಿ ಸಾಲ ಇದ್ದರಲ್ಲಿ ಸೇರಿವೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವೇಳೆ ಜಿಲ್ಲೆಯ ಸಹಕಾರಿ ಬ್ಯಾಂಕ್ಗಳಲ್ಲಿನ 241 ಕೋಟಿ ಸಾಲ ಮನ್ನಾ ಮಾಡಲಾಗಿತ್ತು. ಅದರಲ್ಲಿ ಸರ್ಕಾರದಿಂದ ಎಂಡಿಸಿಸಿ ಬ್ಯಾಂಕ್ 151 ಕೋಟಿ ಪಾವತಿಯಾಗಿದೆ. ಇನ್ನೂ 90 ಕೋಟಿ ಬಾಕಿ ಇದೆ. ಬ್ಯಾಂಕುಗಳು ರೈತರಿಗೆ ಅಲ್ಪಾವಧಿ, ಮಧ್ಯಮಾವದಿ, ದೀರ್ಘಾವಧಿ ಬೆಳೆ ಸಾಲ ವಿತರಣೆ ಮಾಡಿದ್ದು, ಶೇ. 70 ರಷ್ಟು ಸಾಲ ಮರು ಪಾವತಿಯಾಗಿಲ್ಲ. ಬೆಳೆ ಬಾರದೆ ಹಲವು ರೈತರು ನಷ್ಟ ಅನುಭವಿಸಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮಾಜಿ ವ್ಯವಸ್ಥಾಪಕ ಕೆ.ಎಸ್. ಶಿವಲಿಂಗಯ್ಯ.
ಸಾಲ ಪಾವತಿಸಿದವರಿಗೆ ಮಂಡಳಿ ಸಭೆಯಲ್ಲಿ ಚರ್ಚಿಸಿ ಹೆಚ್ಚುವರಿ ಮರು ಸಾಲ ನೀಡುತ್ತಿದ್ದೇವೆ. ಸಾಲ ವಿತರಣೆಯಲ್ಲಿ 2017-18ರಲ್ಲಿ ನಾವು ಗುರಿ ಮೀರಿ ಶೇ. 126ರಷ್ಟು ಸಾಧನೆ ಮಾಡಿದ್ದೇವೆ ಎನ್ನುತ್ತಾರೆ ಎಂಡಿಸಿಸಿ ಬ್ಯಾಂಕ್ ಸಿಇಒ ಬಿ.ನಾಗರಾಜ್.
Click this button or press Ctrl+G to toggle between Kannada and English