ಬೆಂಗಳೂರು: ಸಮ್ಮಿಶ್ರ ಸರಕಾರದ ಚೊಚ್ಚಲ ಬಜೆಟ್ ನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿಧಾನಸಭೆಯಲ್ಲಿ ಇಂದು ಮಂಡಿಸಿದರು.
* 2ಲಕ್ಷದ 13 ಸಾವಿರದ 734 ಕೋಟಿ ರೂ. ಬಜೆಟ್
*ಇಸ್ರೇಲ್ ಮಾದರಿ ಕೃಷಿಗೆ 150 ಕೋಟಿ ರೂ. ವಿನಿಯೋಗ.
*ಪ್ರತಿ ರೈತ ಕುಟುಂಬದ 2 ಲಕ್ಷ ರೂ. ವರೆಗಿನ ಸಾಲ ಮನ್ನಾ.
* ಸಾಲ ಮನ್ನಾ ಮಾಡಲು 34 ಸಾವಿರ ಕೋಟಿ ರೂ. ಮೀಸಲು
* ಪೆಟ್ರೋಲ್ ಬೆಲೆ ಲೀಟರ್ ಗೆ 1.14 ರೂ., ಡೀಸೆಲ್ ಬೆಲೆ 1.12 ರೂ. ಹೆಚ್ಚಳ
*ವಿದ್ಯುತ್ ದರ ಯೂನಿಟ್ ಗೆ 20 ಪೈಸೆ ಹೆಚ್ಚಳ.
*ಕನಕಪುರಕ್ಕೆ ಹೊಸ ವೈದ್ಯಕೀಯ ಕಾಲೇಜು.
*ಮಂಡ್ಯ ವೈದ್ಯಕೀಯ ಆಸ್ಪತ್ರೆಯ ಮೇಲ್ದರ್ಜೆಗೆ 30 ಕೋಟಿ ರೂ.
* ಸಂಧ್ಯಾ ಸುರಕ್ಷಾ ಯೋಜನೆ ಮೊತ್ತ 600ರಿಂದ 1 ಸಾವಿರ ರೂ. ಏರಿಕೆ.
* ರಾಮನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
* ರಾಮನಗರದಲ್ಲಿ ಚಲನಚಿತ್ರ ವಿವಿ ಆರಂಭಿಸಲು 30 ಕೋಟಿ ರೂ. ಅನುದಾನ
* ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ ಬಯೋಮೆಟ್ರಿಕ್ ಕಡ್ಡಾಯ.
*ಸರಕಾರ ಶಾಲೆಗಳಲ್ಲಿ 1ರಿಂದ ಆಂಗ್ಲ ಮಾಧ್ಯಮ ಶಿಕ್ಷಣ.
* ಬೆಳ್ಳಂದೂರು ಕೆರೆ ಪುನಶ್ಚೇತನಕ್ಕೆ 50 ಕೋಟಿ ರೂ.
* ಮಂಡ್ಯ ಮೀಮ್ಸ್ ಅಭಿವೃದ್ಧಿಗೆ 30 ಕೋಟಿ ರೂ. ಮೀಸಲು
* ಮೈಸೂರಿನಲ್ಲಿ ರೇಶ್ಮೆ ಮಾರುಕಟ್ಟೆ
* ಮದ್ಯ ಮೇಲಿನ ತೆರಿಗೆ ಶೆ. 4ರಷ್ಟು ಹೆಚ್ಚಳ
* ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಟ್ರಾನ್ಸ್ ಪ್ಲಾಂಟ್ ಘಟಕ
* ಹಾಸನ ಹಾಲು ಒಕ್ಕೂಟಕ್ಕೆ 50 ಕೋಟಿ ರೂ.
* ಮಂಡ್ಯ ಸರ್ವಾಂಗೀಣ ಅಭಿವೃದ್ಧಿಗೆ 50 ಕೋಟಿ ರೂ.
* ಬೆಂಗಳೂರು ಬಾರ್ ಕೌನ್ಸಿಲ್ ಗೆ 5 ಕೋಟಿ ರೂ.
* ಸಾಲ ಮರು ಪಾವತಿಸಿದವರಿಗೆ ಗರಿಷ್ಠ 25 ಸಾವಿರ ರೂ. ವಾಪಸ್ , 2017 ಮಾರ್ಚ್ 31ರ ತನಕದ ಸುಸ್ತಿ ಸಾಲ ಮನ್ನಾ.
* ಸ್ವ ಉದ್ದೋಗಕ್ಕೆ ಕಾಯಕ ಯೋಜನೆ
* ಕಾಯಕ ಯೋಜನೆಯಲ್ಲಿ 5 ಲಕ್ಷ ರೂ. ತನಕ ಶೂನ್ಯ ಬಡ್ಡಿಯಲ್ಲಿ ಸಾಲ
* ತೆಂಗು ಬೆಳಗಾರರ ಅಭಿವೃದ್ಧಿಗೆ 190 ಕೋಟಿ ರೂ.
* 30 ಕೋಟಿ ರೂ. ವೆಚ್ಚದಲ್ಲಿ ಹಾಸನದಲ್ಲಿ ರಿಂಗ್ ರಸ್ತೆ
* ಹಿಂದಿನ ಸರಕಾರದ ಸಾಲ ಮನ್ನಾದ ಬಾಕಿ ಪೂರ್ಣ ಪಾವತಿ
* ಬಿಎಂಟಿಸಿ ಯಿಂದ 80 ಎಲೆಕ್ಟ್ರಿಕ್ ಬಸ್ ಗಳ ಸೇವೆ
* ಹೆದ್ದಾರಿ ಪ್ರಯಾಣಿಕರ ಅನುಕೂಲಕ್ಕಾಗಿ 3 ಅತ್ಯಾಧುನಿಕ ವಿಶ್ರಾಂತಿ ಗ್ರಹ
* ಬಿಎಂಟಿಸಿಗೆ 100 ಕೋಟಿ ರೂ. ಸಹಾಯ ಧನ
* ಪ್ರವಾಸಿ ಟ್ಯಾಕ್ಸಿ ಚಾಲಕರ ತರಬೇತಿಗೆ ರಿಫ್ರೆಶರ್ ಕೋರ್ಸ್
* ಬೆಂಗಳೂರಿನ ಆರು ಕಡೆ ಎಲಿವೇಟೆಡ್ ಕಾರಿಡಾರ್
* 15825 ಕೋಟಿ ರೂ. ಎಲಿವೇಟೆಡ್ ಕಾರಿಡಾರ್ ಗೆ ಮೀಸಲು
* ನಮ್ಮ ಮೆಟ್ರೋದ ಮೂರನೇ ಹಂತದ ಯೋಜನೆ ವಿಸ್ತರಣೆ
*ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆ. 25 ಕೋಟಿ ರೂ. ಅನುದಾನ
Click this button or press Ctrl+G to toggle between Kannada and English