ವಿದ್ಯೆ ಮಾತ್ರವೇ ಸಮಾಜದಲ್ಲಿ ಗೌರವ ತಂದು ಕೊಡಬಲ್ಲ ಪ್ರಬಲ ಅಸ್ತ್ರ: ಯು.ಟಿ. ಖಾದರ್

11:43 AM, Monday, July 9th, 2018
Share
1 Star2 Stars3 Stars4 Stars5 Stars
(No Ratings Yet)
Loading...

mangloreಮಂಗಳೂರು: ಬಡವರಾಗಿ ಹುಟ್ಟುವುದು ಅಪರಾಧವಲ್ಲ, ಆದರೆ ಬಡವರಾಗಿ ಬದುಕು ಸಾಗಿಸುವುದು ಅಪರಾಧ. ವಿದ್ಯೆಗೆ ಜಾತಿ ಧರ್ಮದ ಪರಿಧಿ ಇರಲು ಸಾಧ್ಯವಿಲ್ಲ ಎಂದು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದರು. ಅವರು ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (NSCDF) ಮಂಗಳೂರು ಕುತ್ತಾರಿನ ಬಾಲ ಸಂರಕ್ಷಣಾ ಕೇಂದ್ರದಲ್ಲಿ 8-07-2018ನೇ ಬಾನುವಾರ ಸಂಜೆ ಆಯೋಜಿಸಿದ್ದ “ಮುಂಗಾರು ಸಂಭ್ರಮ ಮಳೆ ಖುಷಿಗೆ ಹಾಡಿನ ಸಿಂಚನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

manglore-2ಸಂತೋಷ ಸಂಭ್ರಮವನ್ನು ಎಲ್ಲಾ ಜನರಿಗೆ ತಲುಪುವಂತೆ ಮಾಡುವ NSCDF ಕಾರ್ಯ ಮಹತ್ವದ್ದು. ಎಲ್ಲರ ಸಂತಸದಲ್ಲಿ ಸಂತಸ ಕಾಣುವುದು ಉದಾತ್ತವಾದ ಧರ್ಮ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ NSCDF ಅಧ್ಯಕ್ಷ ಗಂಗಾಧರ್ ಗಾಂಧಿ ಮಾತನಾಡಿ NSCDF ಅಭಿವೃದ್ಧಿ, ಮೌಲ್ಯಮಾಪನ, ಅಧ್ಯಯನ, ತರಬೇತಿಯಲ್ಲಿ ನಿರತವಾಗಿರುತ್ತದೆ. ನಡುನಡುವೆ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಅದರ ಭಾಗವೇ ಮುಂಗಾರು ಸಂಭ್ರಮ ಎಂದು ಹೇಳಿದರು.

manglore-3ಬಾಲ ಸಂರಕ್ಷಣಾ ಕೇಂದ್ರದ ಸಂಚಾಲಕ ಡಾ| ಅನಂತಕೃಷ್ಣ ಭಟ್, ಪ್ರತಿಷಾನದ ಗೌರವ ಕಾರ್ಯದರ್ಶಿ ಅಬ್ಬಾಸ್ ಕಿನ್ಯ, ಸಾಮಾಜಿಕ ಕಾರ್ಯಕರ್ತೆ ಯೋಗೀಶರಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಳೆಯ ಕನ್ನಡ ಗೀತೆಗಳಿಗೆ ಜೀವ ತುಂಬಿ ಹಾಡಿ ಬಾಲ ಸಂರಕ್ಷಣಾ ಕೇಂದ್ರದ ಮಕ್ಕಳು ಕುಣಿದು ಕುಪ್ಪಳಿಸುವಂತೆ ಮಾಡಿದ ಗಾಯಕಿ ರಾಣಿ ಪುಷ್ಪಲತಾ ದೇವಿ, ವರ್ಷ ಮತ್ತು ಗಂಗಾಧರ್ ಗಾಂಧಿ ಇವರನ್ನು ಸಚಿವ ಯು ಟಿ ಖಾದರ್ ಶಾಲು ಹೊದಿಸಿ ಗೌರವಿಸಿದರು. ಸಿದ್ದಕಟ್ಟೆ ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English