ಚಿಕ್ಕಮಗಳೂರು : ಧಾರಾಕಾರ ಮಳೆಗೆ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ ಗುಡ್ಡ ಕುಸಿದಿದ್ದು, ಭಾರಿ ಗಾತ್ರದ ಬಂಡೆ ರಸ್ತೆಗುರುಳಿದೆ.
ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ಈಗಾಗಲೇ ನಾಲ್ಕು ಕಡೆ ಗುಡ್ಡ ಕುಸಿದಿದೆ. ಮಣ್ಣು ಕುಸಿಯುತ್ತಿರುವ ಪರಿಣಾಮ ವಾಹನ ಸಂಚಾರಕ್ಕೆ ಚಾಲಕರು ಭಯ ಪಡುತ್ತಿದ್ದು, ಪ್ರವಾಸಿಗರು ಆತಂಕದಲ್ಲೇ ಸಂಚರಿಸುವಂತಾಗಿದೆ.
ನಿರಂತರ ಮಳೆ ರಭಸಕ್ಕೆ ಗಿರಿಯ ಎತ್ತರದಿಂದ ಬಂಡೆ ಕಲ್ಲುಗಳು ಉರುಳಿ ಬೀಳುತ್ತಿರುವುದು ಕಂಡು ಬಂದಿದೆ. ಕೇರಳ ಮೂಲದ ಮಿನಿ ಬಸ್ವೊಂದು ಚಲಿಸುತ್ತಿರುವ ಸಂದರ್ಭದಲ್ಲಿ ಬಸ್ ಮುಂಭಾಗಕ್ಕೆ ಬಂಡೆ ಬಿದ್ದಿದ್ದು, ಭಾರಿ ಅನಾಹುತದಿಂದ ಪಾರಾಗಿದೆ.
Click this button or press Ctrl+G to toggle between Kannada and English