ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಅವಾಂತರ ಸೃಷ್ಠಿ ಮಾಡಿದೆ. ರಾತ್ರಿ ಸುರಿದ ಭಾರೀ ಮಳೆಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಕೊಟ್ಟಿಗೆಯ ಗೋಡೆ ಕುಸಿದು ಮಹಿಳೆ ಅಸುನೀಗಿದ್ದಾರೆ.
ವನಜಾ (48) ಮೃತ ಮಹಿಳೆ. ಮಳೆಯಿಂದ ಕೊಟ್ಟಿಗೆಯ ಗೋಡೆ ಸಂಪೂರ್ಣ ಶಿಥಿಲಗೊಂಡಿತ್ತು ಎನ್ನಲಾಗಿದೆ. ಇದನ್ನು ಅರಿಯದ ಮಹಿಳೆ ಹಸು ಕಟ್ಟಿ ಹಾಕಲು ಕೊಟ್ಟಿಗೆಗೆ ತೆಗರಳಿದ್ದಾರೆ. ಈ ವೇಳೆ ಗೋಡೆ ಕುಸಿದು ಮೃತರಾಗಿದ್ದಾರೆ.
ಇನ್ನು ಕೊಪ್ಪ ತಾಲೂಕಿನಲ್ಲೂ ಕೂಡ ವರುಣ ತನ್ನ ಆರ್ಭಟ ಮುಂದುವರೆಸಿದ್ದಾನೆ. ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ದೇವರಮನೆ ಗ್ರಾಮದಲ್ಲಿನ ರಘು ಎಂಬುವವರಿಗೆ ಸೇರಿದ ಮನೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಇನ್ನು ಪ್ರಸಿದ್ಧ ಪ್ರವಾಸಿ ತಾಣವಾದ ಮುಳ್ಳಯ್ಯನ ಗಿರಿಶ್ರೇಣಿಯಲ್ಲಿ ಮತ್ತೆ ಗುಡ್ಡ ಕುಸಿದಿದೆ.
ಪ್ರವಾಹದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ ನದಿಯ ರಭಸಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ರಸ್ತೆಗಳಲ್ಲಿ ನಿಂತಿರುವ ನೀರು ಕೆರೆಗಳಂತೆ ಗೋಚರವಾಗುತ್ತಿವೆ. 15 ವರ್ಷಗಳ ಬಳಿಕ ಶೃಂಗೇರಿಯಲ್ಲಿ ಈ ರೀತಿಯ ಮಳೆ ಆಗಿದೆ.
Click this button or press Ctrl+G to toggle between Kannada and English