ಬಂಟ್ವಾಳದಲ್ಲಿ ಸ್ವಚ್ಚಗೆಳತಿ

5:32 PM, Tuesday, July 10th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

bantwalaಬಂಟ್ವಾಳ: ದ.ಕ.ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್ ತಾಲೂಕು ಪಂಚಾಯತ್ ಬಂಟ್ವಾಳ, ರಾಷ್ಟ್ರೀಯ ಸೇವಾ ಯೋಜನೆ, ಮಂಗಳೂರು ವಿಶ್ವವಿದ್ಯಾನಿಲಯ , ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಹಭಾಗಿತ್ವದಲ್ಲಿ ಸ್ವಚ್ಚಗೆಳತಿ ಋತುಸ್ರಾವ ಜಾಗ್ರತಿ ಅಭಿಯಾನ 2018-19 ತಾಲೂಕು ಹಂತದ ತರಭೇತಿ ಕಾರ್ಯಗಾರ ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯದಲ್ಲಿ ನಡೆಯಿತು.

ಕಾರ್ಯಕ್ರಮದ ಅದ್ಯಕ್ಷ ತೆಯನ್ನು ವಹಸಿ ಮಾತನಾಡಿದ ತಾ.ಪಂ.ಅದ್ಯಕ್ಷ ಚಂದ್ರ ಹಾಸ ಕರ್ಕೇರ ಸ್ವಚ್ಚತಾ ಕಾರ್ಯದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಿದಾಗ ಮಾತ್ರ ಯಶಸ್ವಿ ಯಾಗಲು ಸಾಧ್ಯ. ವಿದ್ಯಾರ್ಥಿ ಗಳಲ್ಲಿ ಕರ್ತವ್ಯ ಪ್ರಜ್ಞೆ ಯನ್ನು ಮೂಡಿಸಿದಾಗ ಮಾತ್ರ ಈ ದೇಶದಲ್ಲಿ ಈ ಯೋಜನೆ ಪ್ರಗತಿ ಸಾಧಿಸಲು ಸಾದ್ಯ ಎಂದರು. ಪ್ರತಿಯೊಬ್ಬರು ಜವಬ್ದಾರಿ ಗಳನ್ನು ಅರಿತು‌ಕೆಲಸ ಮಾಡೋಣ ಎಂದರು.

ಕಾರ್ಯ ಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ಪಾಂಡುರಂಗ ನಾಯಕ್ ನಾಯಕ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ವೈಯಕ್ತಿಕ ಮತ್ತು ಪರಿಸರದ ಸ್ವಚ್ಚತೆ ಬಹಳ ಮುಖ್ಯ ಎಂದರು.

ಮುಖ್ಯ ಅತಿಥಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ಧನಲಕ್ಷೀ ಸಿ ಬಂಗೇರ, ತಾ.ಪಂ.ಮುಖ್ಯ ಕಾರ್ಯನಿರ್ವಹಣಾದಿಕಾರಿ ರಾಜಣ್ಣ, ಸಂಪನ್ಮೂಲ ವ್ಯಕ್ತಿಗಳಾದ ಡಾ . ದೀಪ ಪ್ರಭು, ಡಾ ವಿದ್ಯಾ, ಗುಣ ಸಾಗರಿ ರಾವ್, ಭಾಗ್ಯಶ್ರೀ ಬಾಳಿಗಾ, ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಪ್ರಸ್ತಾವಿಕ‌ವಾಗಿ ಮಾತಮಾಡಿದರು.

ಕಾಲೇಜಿನ ಯೋಜನಾಧಿಕಾರಿ ಕಿಟ್ಟು ರಾಮಕುಂಜ ಸ್ವಾಗತಿಸಿ, ಪ್ರೋ.ನಾರಾಯಣ ಭಂಡಾರಿ ವಂದಿಸಿದರು. ವಿದ್ಯಾರ್ಥಿ ನಿ ಪಂಚ ಶ್ರೀ ಕಾರ್ಯಕ್ರಮ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English