ಮಂಗಳೂರು ವಿವಿ ಬಿ.ಕಾಂ ವಿದ್ಯಾರ್ಥಿಗಳಿಗೆ ‘ನುಡಿ ನೂಪುರ’ದಲ್ಲಿ ಲೈಂಗಿಕತೆ ಪಾಠ

9:42 PM, Tuesday, July 10th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Mangalore Uvಮಂಗಳೂರು  : ವಿವಿಯ ಪಠ್ಯ ಪುಸ್ತಕ ರಚನಾ ಸಮಿತಿ ಈ ವರ್ಷದ ದ್ವಿತೀಯ ಬಿ.ಕಾಂ ವಿದ್ಯಾರ್ಥಿಗಳಿಗೆ ಸಿದ್ಧಗೊಳಿಸಿರುವ ಕನ್ನಡ ಪಠ್ಯಪುಸ್ತಕ ನುಡಿ ನೂಪುರದಲ್ಲಿ ತೂರಿಸಿರುವ ಮಟ್ಟಾರು ವಿಠಲ ಹೆಗ್ಡೆ ಎಂಬ ಕಥೆಗಾರರೊಬ್ಬರು 1939ರಲ್ಲಿ ಬರೆದಿರುವ ಮಗುವಿನ ತಂದೆ ಎಂಬ ಲೈಂಗಿಕ ಕಥೆ ಯನ್ನು ಹೇಳಿಕೊಡಲು ಮುಂದಾಗಿದೆ ಎಂದು ವಿದ್ಯಾರ್ಥಿ ಪರಿಷತ್ ಆರೋಪಿಸಿದೆ.

ಒಂದು ಕಾಲದಲ್ಲಿ ಉತ್ತಮ ಶಿಕ್ಷಣಕ್ಕೆ ರಾಷ್ಟ್ರ – ಅಂತರರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದಿದ್ದು ಮಂಗಳೂರು ವಿಶ್ವವಿದ್ಯಾನಿಲಯ ಇತ್ತೀಚಿನ ವರ್ಷಗಳಲ್ಲಿ ತನ್ನ ಆಡಳಿತ ವರ್ಗದವರ ವೈಫಲ್ಯ ಹಾಗು ಎಡವಟ್ಟಿನಿಂದ ಕುಖ್ಯಾತಿ ಪಡೆಯುವಂತಾಗಿದೆ. ಪರೀಕ್ಷಾ ಗೊಂದಲ, ದೋಷಪೂರಿತ ಫಲಿತಾಂಶ ಪ್ರಕಟ, ಅಂಕಪಟ್ಟಿ ಸಮಸ್ಯೆಗಳಿಂದ ಪ್ರಾರಂಭವಾಗಿ ಅಂಕಪಟ್ಟಿ ಹಗರಣ, ಸಿ.ಸಿ ಕ್ಯಾಮರಾ ಹಗರಣ, ನೇಮಕಾತಿ ಹಗರಣ, ಗುತ್ತಿಗೆ ಹಗರಣ ಹೀಗೆ ಸಾಲು ಸಾಲು ಹಗರಣಗಳಲ್ಲಿ ಮಿಂದೆದ್ದಿರುವ ವಿವಿಯ ಆಡಳಿತ ಮಂಡಳಿ ಕಳೆದ ವರ್ಷ ಪಠ್ಯ ಪುಸ್ತಕದ ವಿಚಾರದಲ್ಲಿ ಸೈನಿಕರಿಗೆ ಅಪಮಾನ ಮಾಡುವಂತಹ ಪಠ್ಯವನ್ನು ತೂರಿಸಿ ತದನಂತರ ಪ್ರಜ್ಞಾವಂತ ಸಮಾಜದ ವಿರೋಧ ಹಾಗೂ ವಿದ್ಯಾರ್ಥಿ ಪರಿಷತ್ ಹೋರಾಟದ ಕಾರಣದಿಂದಾಗಿ ಮಾಧ್ಯಮಗಳಲ್ಲಿ ತೀವ್ರ ಚರ್ಚೆಯಾದ ಕಾರಣದಿಂದ ವಿವಿಯ ಆಡಳಿತ ಮಂಡಳಿ ಆ ವಿವಾದಿತ ಪಠ್ಯವನ್ನು ಹಿಂಪಡೆದಿತ್ತು.

ಆದರೆ, ಇವೆಲ್ಲದರಿಂದ ಪಾಠ ಕಲಿಯದ ವಿವಿಯ ಆಡಳಿತ ಮಂಡಳಿಯು ಈ ಶೈಕ್ಷಣಿಕ ವರ್ಷದಲ್ಲೂ ಮತ್ತೆ ಪುನ: ಕನ್ನಡ ಭಾಷಾ ಪಠ್ಯ ಮತ್ತು ಪಠ್ಯ ಪುಸ್ತಕ ಆಯ್ಕೆ ವಿಚಾರದಲ್ಲೂ ವಿವಾದಕ್ಕೆ ನಾಂದಿಹಾಡಿದೆ. ಕಳೆದ ವರ್ಷದ ಪ್ರಜ್ಞಾವಂತ ಸಮಾಜ ಹಾಗೂ ವಿದ್ಯಾರ್ಥಿ ಸಮೂದಾಯದಿಂದ ವ್ಯಕ್ತವಾದ ಭಾರಿ ವಿರೋಧವನ್ನು ಮರೆತಂತಿರುವ ವಿವಿಯ ಪಠ್ಯ ಪುಸ್ತಕ ರಚನಾ ಸಮಿತಿ ಈ ವರ್ಷದ ದ್ವಿತೀಯ ಬಿ.ಕಾಂ ವಿದ್ಯಾರ್ಥಿಗಳಿಗೆ ಸಿದ್ಧಗೊಳಿಸಿರುವ ಕನ್ನಡ ಪಠ್ಯಪುಸ್ತಕ ನುಡಿ ನೂಪುರದಲ್ಲಿ ತೂರಿಸಿರುವ ಮಟ್ಟಾರು ವಿಠಲ ಹೆಗ್ಡೆಯವರ  ಮಗುವಿನ ತಂದೆ ಎಂಬ ಲೈಂಗಿಕ ಕಥೆ  ಈ ವಿವಾದಕ್ಕೆ ಎಡೆಮಾಡಿಕೊಟ್ಟಿರುವುದಲ್ಲದೆ, ಪ್ರಜ್ಞಾವಂತ ಸಮಾಜ ಹಾಗೂ ಶೈಕ್ಷಣಿಕ ವಲಯ ದಿಗ್ಭ್ರಮೆಯಾಗುವಂತೆ ಹಾಗೂ ತಲೆ ತಗ್ಗಿಸುವಂತೆ ಮಾಡಿದೆ.

ಒಟ್ಟಾರೆ ಓದಿದಾಗ ಕಥೆಯಲ್ಲೆಲ್ಲಾ ಕೇವಲ ಅಶ್ಲೀಲತೆಯ ಪ್ರಯೋಗಗಳು, ಲೈಂಗಿಕತೆಯಿಂದ ಕೂಡಿರುವ ದೈಹಿಕ ವರ್ಣನೆಗಳು, ವಿವಾಹವೇತರ ಸಂಬಂಧಗಳನ್ನು ನೈತಿಕಗೊಳಿಸುವ ಪ್ರಯತ್ನಗಳೇ ಎದ್ದು ತೋರುತ್ತಿದ್ದು, ಭಾರತೀಯ ಕೌಟುಂಬಿಕ ಮೌಲ್ಯ ಹಾಗೂ ನೈತಿಕ ಬದುಕಿನ ಭಾವನೆಗಳಿಗೆ ಧಕ್ಕೆ ತರುವಂತದ್ದಾಗಿದೆ. ಅಷ್ಟೇ ಅಲ್ಲದೆ, ಈ ಪಠ್ಯವನ್ನು ಅಧ್ಯಾಪಕರು ತರಗತಿಯಲ್ಲಿ ಬೋಧಿಸುವುದಾದರೂ ಹೇಗೆ? ಹದಿ ವಯಸ್ಸಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಏನು ಬೇಕು? ಏನು ಬೇಡ? ಯಾವುದು ಸೂಕ್ತ ಎಂದು ಯೋಚಿಸುವ ಪ್ರಜ್ಞಾವಂತಿಕೆ ಇಲ್ಲದವರು ಮಂಗಳೂರು ವಿವಿಯ ಪಠ್ಯಪುಸ್ತಕ ರಚನಾ ಸಮಿತಿಯಲ್ಲಿರುವುದು ನಾಚಿಕೆಗೇಡಿನ ಸಂಗತಿ. ಇಂತಹ ಪಠ್ಯಗಳು ಸ್ವ-ಘೋಷಿತ ವಿಚಾರವಾದಿಗಳ ವಿಕ್ಷಿಪ್ತ ಮಾನಸಿಕತೆಯನ್ನಷ್ಟೇ ಪ್ರತಿಬಿಂಬಿಸುತ್ತವೆ. ಇಂತಹ ಮಾನಸಿಕತೆಯ ಮಂದಿ ಸಮಾಜದ ನೈತಿಕ ಸ್ವಾಸ್ಥ್ಯವನ್ನು ಛಿದ್ರಗೊಳಿಸುವ ಸಂಚಿನ ರೂವಾರಿಗಳು. ಇಂಥವರ ಇಂತಹ ಹೇಯ ಕೃತ್ಯಗಳನ್ನು ಗಮನಿಸಿದಾಗ ಅವರುಗಳು ದುರುದ್ದೇಶದಿಂದಲೇ ವಿದ್ಯಾರ್ಥಿಗಳ ನೈತಿಕ ಸ್ಥೈರ್ಯವನ್ನು ಹಾಗು ಆರೋಗ್ಯ ಪೂರ್ಣ ಮನಸ್ಸನ್ನು ಕೆಡಿಸಿ ಸಾಮರಸ್ಯದ ಕೌಟುಂಬಿಕ ಸಂಸ್ಥೆಯ ನಾಶಕ್ಕೆ ಸೂತ್ರ ಹೆಣೆಯುತ್ತಿರುವಂತಿದೆ. ಇದನ್ನು ವಿಧ್ಯಾರ್ಥಿ ಪರಿಷತ್ ಬಲವಾಗಿ ಪ್ರತಿಭಟಿಸುವುದು ಎಂದು ಹೇಳಿದ್ದಾರೆ.

ಆದ್ದರಿಂದ ವಿದ್ಯಾರ್ಥಿ ಪರಿಷತ್ ಆಗ್ರಹಿಸುವುದೇನೆಂದರೆ, ವಿವಿಯ ಆಡಳಿತ ಮಂಡಳಿಯ ಈ ಕೂಡಲೇ ನುಡಿ ನೂಪುರ ಪಠ್ಯಪುಸ್ತಕವನ್ನು ಸಂಪೂರ್ಣವಾಗಿ ಹಿಂಪಡೆದು (ಕೇವಲ ಆ ಕಥೆ ಮಾತ್ರವಲ್ಲ), ಪಠ್ಯಪುಸ್ತಕ ರಚನೆಯಲ್ಲಿ ಪದೇ ಪದೇ ಎಡವುತ್ತಿರುವ ಪಠ್ಯಪುಸ್ತಕ ರಚನೆ ಸಮಿತಿಯನ್ನು ರದ್ದುಗೊಳಿಸಬೇಕು. ಸಮಿತಿಯ ಅಧ್ಯಕ್ಷರು ನೈತಿಕ ಹೊಣೆಯನ್ನು ಹೊತ್ತು ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಿವಿ ವ್ಯಾಪ್ತಿಯಲ್ಲಿ ಎಲ್ಲಾ ಜಿಲ್ಲೆಗಳಾದ್ಯಂತ ಪ್ರತಿಭಟನೆ ಮಾಡುವುದಾಗಿ ಈ ಮೂಲಕ ವಿದ್ಯಾರ್ಥಿ ಪರಿಷತ್ ಎಚ್ಚರಿಸುತ್ತದೆ ಹಾಗೂ ತರಗತಿಯಲ್ಲಿ ಬೋಧನೆ ಮಾಡಬೇಕಾದವರು ಹಾಗು ಎಲ್ಲರಿಗೂ ಗುರು ಸಮಾನರಾದ ಅಧ್ಯಾಪಕರು ಇಂತಹ ಪಠ್ಯಗಳನ್ನು ವಿರೋಧಿಸುವ ಗಟ್ಟಿ ಧ್ವನಿಯನ್ನು ವ್ಯಕ್ತಪಡಿಸಿದರೆ, ವಿದ್ಯಾರ್ಥಿಗಳ ಹೋರಾಟಕ್ಕೆ ನೈತಿಕ ಬೆಂಬಲ ಸಿಕ್ಕಿದಂತಾಗುತ್ತದೆ ಎಂಬುದನ್ನು ಪರಿಷತ್ ಅಧ್ಯಾಪಕ ಬಂಧುಗಳ ಗಮನಕ್ಕೆ  ತರಲು ಮುಂದಾಗಿದೆ,

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English