ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ದ್ವಿತೀಯ ಬಿ.ಕಾಂ ವಿದ್ಯಾರ್ಥಿಗಳಿಗೆ ಸಿದ್ಧಗೊಳಿಸಿರುವ ಕನ್ನಡ ಪಠ್ಯಪುಸ್ತಕ ನುಡಿ ನೂಪುರದಲ್ಲಿ ದಿವಂಗತ ಮಟ್ಟಾರು ವಿಠಲ ಹೆಗ್ಡೆ ಬರೆದಿರುವ ಮಗುವಿನ ತಂದೆ ಎಂಬ ಲೈಂಗಿಕ ಪಾಠದ ಬಗ್ಗೆ ಮೆಗಾ ಮೀಡಿಯಾ ನ್ಯೂಸ್ ಜುಲೈ 10 ರಂದು ಸುದ್ದಿ ಪ್ರಕಟಿಸಿದ ಬೆನ್ನಲ್ಲೇ ಆ ಪಾಠವನ್ನು ಹಿಂಪಡೆದಿದೆ ಎನ್ನುವ ಪ್ರಕಟಣೆಯನ್ನು ನೀಡಿದೆ.
ಪರೀಕ್ಷಾ ಗೊಂದಲ, ದೋಷಪೂರಿತ ಫಲಿತಾಂಶ ಪ್ರಕಟ, ಅಂಕಪಟ್ಟಿ ಸಮಸ್ಯೆಗಳಿಂದ ಪ್ರಾರಂಭವಾಗಿ ಅಂಕಪಟ್ಟಿ ಹಗರಣ, ಸಿ.ಸಿ ಕ್ಯಾಮರಾ ಹಗರಣ, ನೇಮಕಾತಿ ಹಗರಣ, ಗುತ್ತಿಗೆ ಹಗರಣ ಹೀಗೆ ಸಾಲು ಸಾಲು ಹಗರಣಗಳಲ್ಲಿ ಮಿಂದೆದ್ದಿರುವ ವಿವಿಯ ಆಡಳಿತ ಮಂಡಳಿ ಕಳೆದ ವರ್ಷ ಪಠ್ಯ ಪುಸ್ತಕದ ವಿಚಾರದಲ್ಲಿ ಸೈನಿಕರಿಗೆ ಅಪಮಾನ ಮಾಡುವಂತಹ ಪಠ್ಯವನ್ನು ತೂರಿಸಿ ತದನಂತರ ಪ್ರಜ್ಞಾವಂತ ಸಮಾಜದ ವಿರೋಧಕ್ಕೆ ಒಳಗಾಗಿತ್ತು.
ವಿವಿಯ ಪಠ್ಯ ಪುಸ್ತಕ ರಚನಾ ಸಮಿತಿ ಈ ವರ್ಷದ ದ್ವಿತೀಯ ಬಿ.ಕಾಂ ವಿದ್ಯಾರ್ಥಿಗಳಿಗೆ ಸಿದ್ಧಗೊಳಿಸಿರುವ ಕನ್ನಡ ಪಠ್ಯಪುಸ್ತಕ ನುಡಿ ನೂಪುರದಲ್ಲಿ ತೂರಿಸಿರುವ ಮಟ್ಟಾರು ವಿಠಲ ಹೆಗ್ಡೆಯವರ ಮಗುವಿನ ತಂದೆ ಎಂಬ ಲೈಂಗಿಕ ಕಥೆ ಈ ವಿವಾದಕ್ಕೆ ಎಡೆಮಾಡಿಕೊಟ್ಟಿರುವುದಲ್ಲದೆ, ಪ್ರಜ್ಞಾವಂತ ಸಮಾಜ ಹಾಗೂ ಶೈಕ್ಷಣಿಕ ವಲಯ ದಿಗ್ಭ್ರಮೆಯಾಗುವಂತೆ ಹಾಗೂ ತಲೆ ತಗ್ಗಿಸುವಂತೆ ಮಾಡಿತ್ತು.
ಮಗುವಿನ ತಂದೆ ಎಂಬ ಲೈಂಗಿಕ ಪಾಠ ಓದಿದಾಗ ಕಥೆಯಲ್ಲೆಲ್ಲಾ ಕೇವಲ ಅಶ್ಲೀಲತೆಯ ಪ್ರಯೋಗಗಳು, ಲೈಂಗಿಕತೆಯಿಂದ ಕೂಡಿರುವ ದೈಹಿಕ ವರ್ಣನೆಗಳು, ವಿವಾಹವೇತರ ಸಂಬಂಧಗಳನ್ನು ನೈತಿಕಗೊಳಿಸುವ ಪ್ರಯತ್ನಗಳೇ ಎದ್ದು ತೋರಿಸಲಾಗಿದ್ದು, ಭಾರತೀಯ ಕೌಟುಂಬಿಕ ಮೌಲ್ಯ ಹಾಗೂ ನೈತಿಕ ಬದುಕಿನ ಭಾವನೆಗಳನ್ನು ಪ್ರಶ್ನೆ ಮಾಡುವಂತಿತ್ತು. ಅಷ್ಟೇ ಅಲ್ಲದೆ, ಈ ಪಠ್ಯವನ್ನು ಅಧ್ಯಾಪಕರು ತರಗತಿಯಲ್ಲಿ ಬೋಧಿಸುವುದಾದರೂ ಹೇಗೆ? ಹದಿ ವಯಸ್ಸಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ದಾರಿ ತಪ್ಪಿಸುವಂತಿತ್ತು .
Click this button or press Ctrl+G to toggle between Kannada and English